* ಭಾರತದ 19 ವರ್ಷದ ಯುವ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ 2025ರ ಮಹಿಳಾ ಚೆಸ್ ವಿಶ್ವಕಪ್ ಅನ್ನು ಜಯಿಸಿದ್ದಾರೆ. ಜಾರ್ಜಿಯಾದ ಬಟುಮಿಯಲ್ಲಿ ನಡೆದ ಫೈನಲ್ನಲ್ಲಿ ಭಾರತದ ಹಿರಿಯ ಆಟಗಾರ್ತಿ ಕೊನೆರು ಹಂಪಿ ಅವರನ್ನು ಸೋಲಿಸಿ ಈ ಸಾಧನೆ ಮಾಡಿದರು.* ಈ ಜಯದೊಂದಿಗೆ ದಿವ್ಯಾ ಚೆಸ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.* ಕಳೆದ ವರ್ಷವೇ ವಿಶ್ವ ಚಾಂಪಿಯನ್ ಆಗಿದ್ದ ದಿವ್ಯಾ, ಇದೀಗ ವಿಶ್ವಕಪ್ನ ಚಾಂಪಿಯನ್ ಕೂಡ ಆಗಿದ್ದಾರೆ.* ಫೈನಲ್ನ ಮೊದಲ ಎರಡು ಪಂದ್ಯಗಳು ಡ್ರಾ ಆಗಿದ್ದರೂ, ಟೈ-ಬ್ರೇಕ್ನಲ್ಲಿ ದಿವ್ಯಾ ಚಾಣಾಕ್ಷ ನಡೆಯಿಂದ ಗೆಲುವು ಸಾಧಿಸಿದರು. ರ್ಯಾಪಿಡ್ ಪಂದ್ಯಗಳಲ್ಲಿ ಅನುಭವಹೊಂದಿದ ಕೊನೆರು ಹಂಪಿಯನ್ನು ಪರಾಭವಗೊಳಿಸಿದರು.* ಈ ಜಯದಿಂದ ದಿವ್ಯಾ ಭಾರತದ ನಾಲ್ಕನೇ ಮಹಿಳಾ ಗ್ರ್ಯಾಂಡ್ಮಾಸ್ಟರ್ ಆಗಿದ್ದಾರೆ. ವಿಶೇಷವೆಂದರೆ, ಈ ಸಾಧನೆ ಅವರು ಭಾರತದ ಮೊದಲ ಗ್ರ್ಯಾಂಡ್ಮಾಸ್ಟರ್ ಕೊನೆರು ಹಂಪಿಯನ್ನು ಸೋಲಿಸುವ ಮೂಲಕ ಸಾಧಿಸಿದ್ದಾರೆ.