* ದಿನೇಶ್ ಕಾರ್ತಿಕ್ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಸಾಧನೆಯೊಂದಿಗೆ ಅವರು ಭಾರತದ ದಿಗ್ಗಜ ಮಾಜಿ ನಾಯಕ, ವಿಕೆಟ್ ಕೀಪರ್ ಎಂ.ಎಸ್. ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ.* ದಿನೇಶ್ ಕಾರ್ತಿಕ್ ಐಪಿಎಲ್ 2024 ನಂತರ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು, ಆದರೆ ಮರಳಿ ಕಮ್‌ಬ್ಯಾಕ್ ಮಾಡಿದರು. ರಾಜಸ್ಥಾನ್ ರಾಯಲ್ಸ್ ಮಾಲಿಕತ್ವದ ಪಾರ್ಲ್ ರಾಯಲ್ಸ್ ಅವರನ್ನು ಖರೀದಿಸಿದ್ದು, ಅವರು ದಕ್ಷಿಣ ಆಫ್ರಿಕಾ 20 ಲೀಗ್‌ನಲ್ಲಿ ಆಡುತ್ತಿದ್ದಾರೆ.* ದಿನೇಶ್ ಕಾರ್ತಿಕ್ ರಾಜಸ್ಥಾನ್ ರಾಯಲ್ಸ್ ತಂಡದ ವಿಕೆಟ್ ಕೀಪರ್ ಆಗಿದ್ದು, ಈ ಮೂಲಕ ದಿನೇಶ್ ಕಾರ್ತಿಕ್ ಐಪಿಎಲ್ ನಂತರ ಮಾನ್ಯತೆ ಪಡೆದ ಫ್ರಾಂಚೈಸಿ ಟಿ20 ಲೀಗ್‌ನ ಭಾಗವಾದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.* ಇತ್ತೀಚೆಗೆ ನಡೆದ ಡರ್ಬನ್ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 15 ಎಸೆತಗಳಲ್ಲಿ 21 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಇನ್ನಿಂಗ್ಸ್ ಮೂಲಕ ದಿನೇಶ್ ಕಾರ್ತಿಕ್ ಧೋನಿ ದಾಖಲೆಯನ್ನು ಮುರಿದಿದ್ದಾರೆ.* ಇಲ್ಲಿಯವರೆಗೆ ದಿನೇಶ್ ಕಾರ್ತಿಕ್ 409 ಟಿ20 ಪಂದ್ಯಗಳಲ್ಲಿ 7451 ರನ್ ಗಳಿಸಿದ್ದಾರೆ. ಧೋನಿ 391 ಟಿ20 ಪಂದ್ಯಗಳಲ್ಲಿ 7432 ರನ್ ಗಳಿಸಿದ್ದಾರೆ.* ದಕ್ಷಿಣ ಆಫ್ರಿಕಾ 20 ಲೀಗ್‌ಗೂ ಮುನ್ನ ಈ ದಾಖಲೆ ಮುರಿಯಲು ದಿನೇಶ್ ಕಾರ್ತಿಕ್‌ಗೆ 26 ರನ್‌ಗಳ ಅಗತ್ಯವಿತ್ತು. ಅವರು ಕಳೆದ 8 ಪಂದ್ಯಗಳಲ್ಲಿ ಕೇವಲ ಐದು ಬಾರಿ ಮಾತ್ರ ಬ್ಯಾಟ್ ಮಾಡಲು ಅವಕಾಶ ಸಿಕ್ಕಿತ್ತು. ಆದರೆ ಕಳೆದ 4 ಇನ್ನಿಂಗ್ಸ್‌ಗಳಲ್ಲಿ 19 ರನ್ ಮಾತ್ರ ಸಿಡಿಸಿದ್ದರು. ಬಹುತೇಕ ಪಂದ್ಯಗಳಲ್ಲಿ ಗೆಲುವಿನ10-20 ರನ್ ಇದ್ದಾಗ ಬ್ಯಾಟಿಂಗ್ ಬಂದಿದ್ದರು.* ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ (15 ಎಸೆತಗಳಲ್ಲಿ 21) ಪ್ರಮುಖ ಇನಿಂಗ್ಸ್ ಆಡಿದರು. ಇನ್ನು ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಹೆಚ್ಚು ರನ್ಗಳಿಸಿದ ಭಾರತೀಯ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು 399 ಪಂದ್ಯಗಳಲ್ಲಿ 12,886 ರನ್ಗಳಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 448 ಪಂದ್ಯಗಳಲ್ಲಿ 11,830 ರನ್ಳಿಸಿ 2ನೇ ಸ್ಥಾನದಲ್ಲಿ, ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ 344 ಪಂದ್ಯಗಳಲ್ಲಿ 9,797ರನ್, ಸುರೇಶ್ ರೈನಾ 336 ಪಂದ್ಯಗಳಲ್ಲಿ 8654 ರನ್, ಸೂರ್ಯಕುಮಾರ್ ಯಾದವ್ 306 ಪಂದ್ಯಗಳಲ್ಲಿ 7887 ರನ್ ಹಾಗೂ ಕೆಎಲ್ ರಾಹುಲ್ 226 ಪಂದ್ಯಗಳಲ್ಲಿ 7586 ರನ್ಗಳಿಸಿ ಕಾರ್ತಿಕ್ಗಿಂತ ಮುಂದಿದ್ದಾರೆ.