Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ವಾಜಪೇಯಿ ಜನ್ಮದಿನೋತ್ಸವ: ದಿಲ್ಲಿಯಲ್ಲಿ ವಿಶೇಷ ಅಟಲ್ ಕ್ಯಾಂಟೀನ್ ಯೋಜನೆ ಆರಂಭ
26 ಡಿಸೆಂಬರ್ 2025
* ದಿಲ್ಲಿ ಸರ್ಕಾರವು ಬಡವರು, ದಿನಗೂಲಿ ಕಾರ್ಮಿಕರು ಹಾಗೂ ಕಡಿಮೆ ಆದಾಯದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದಿಂದ
ಅಟಲ್ ಕ್ಯಾಂಟೀನ್ ಯೋಜನೆ
ನ್ನು ಜಾರಿಗೆ ತಂದಿದೆ. ಈ ಕ್ಯಾಂಟೀನ್ಗಳು ಕರ್ನಾಟಕದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತಿವೆ. "ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನ ಸ್ಮರಣಾರ್ಥ ಈ ಯೋಜನೆ ಆರಂಭಿಸಲಾಗಿದೆ."
* ನಗರಾದ್ಯಂತ ಒಟ್ಟು
100 ಅಟಲ್ ಕ್ಯಾಂಟೀನ್ಗಳನ್ನು ಹಂತ ಹಂತವಾಗಿ ಆರಂಭಿಸಲಾಗಿದ್ದು
, ಮೊದಲ ಹಂತದಲ್ಲಿ 45 ಕ್ಯಾಂಟೀನ್ಗಳು ಸೇವೆ ಆರಂಭಿಸಿವೆ. ಉಳಿದ 55 ಕ್ಯಾಂಟೀನ್ಗಳನ್ನು ಮುಂದಿನ ದಿನಗಳಲ್ಲಿ ಉದ್ಘಾಟಿಸುವ ಯೋಜನೆ ಇದೆ.
* ಪ್ರತಿ ಕ್ಯಾಂಟೀನ್ನಲ್ಲಿ ದಿನಕ್ಕೆ
ಎರಡು ಸಮಯಗಳಲ್ಲಿ ಊಟ ವಿತರಣೆ
ಮಾಡಲಾಗುತ್ತದೆ.
=> ಬೆಳಗ್ಗೆ
11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ
=>
ಸಂಜೆ
6:30ರಿಂದ ರಾತ್ರಿ 9:30ರವರೆಗೆ
ಪ್ರತಿ ವೇಳೆಯಲ್ಲಿ
500 ಜನರಿಗೆ ಪೌಷ್ಟಿಕಯುಕ್ತ ಊಟ
ಒದಗಿಸಲಾಗುತ್ತದೆ. ಊಟದಲ್ಲಿ ದಾಲ್, ಅನ್ನ, ಚಪಾತಿ, ತರಕಾರಿ ಪಲ್ಯ ಹಾಗೂ ಉಪ್ಪಿನಕಾಯಿ ಸೇರಿರುತ್ತವೆ.
* ಈ ಸಂಪೂರ್ಣ ಊಟಕ್ಕೆ
ಕೇವಲ ರೂ.5 ದರ
ನಿಗದಿಪಡಿಸಲಾಗಿದೆ. ಊಟ ವಿತರಣೆ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ಸುಗಮಗೊಳಿಸಲು
ಡಿಜಿಟಲ್ ಟೋಕನ್ ವ್ಯವಸ್ಥೆ
ಜಾರಿಗೆ ತರಲಾಗಿದೆ. ಇದರಿಂದ ಅಕ್ರಮ ತಡೆದು, ಪ್ರತಿಯೊಬ್ಬ ಅರ್ಹ ವ್ಯಕ್ತಿಗೂ ಸಮಾನವಾಗಿ ಸೇವೆ ದೊರಕುವಂತೆ ಮಾಡಲಾಗಿದೆ ಹಾಗೂ ಈ ಯೋಜನೆ ನಗರದಲ್ಲಿ ಆಹಾರ ಭದ್ರತೆಯನ್ನು ಬಲಪಡಿಸುವ ಮಹತ್ವದ ಸಾಮಾಜಿಕ ಕಲ್ಯಾಣ ಕ್ರಮವಾಗಲಿದೆ.
Take Quiz
Loading...