* ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮೇ 1 ನಂತರ ದೆಹಲಿ ಸರ್ಕಾರ 15 ವರ್ಷಗಳಿಗಿಂತ ಹಳೆಯ ವಾಹನಗಳಿಗೆ ನಗರದಲ್ಲಿನ ಯಾವುದೇ ಪೆಟ್ರೋಲ್ ಪಂಪ್ಗಳಲ್ಲಿ ಪೆಟ್ರೋಲ್ ಸರಬರಾಜು ಮಾಡಬಾರದೆಂದು ನಿರ್ಧರಿಸಿದೆ.* ಇದೀಗ ದೆಹಲಿಯ ಪೆಟ್ರೋಲ್ ಬಂಕ್ ಗಳಲ್ಲಿ ವಾಹನಗಳ ಆಯಸ್ಸನ್ನು ಪತ್ತೆ ಮಾಡುವ 'ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾ' ಅಳವಡಿಸಲಾಗಿದೆ.* ಎಎನ್ಪಿಆರ್ : ಇಂಧನ ಭರ್ತಿಗೆ ಬರುವ ಎಲ್ಲಾ ವಾಹನಗಳ ನಂಬರ್ ಪ್ಲೇಟ್ಗಳನ್ನು ಎಎನ್ಪಿಆರ್ ಕ್ಯಾಮೆರಾ ಸ್ಕ್ಯಾನ್ ಮಾಡುತ್ತದೆ ಹಾಗೂ ಆ ಮೂಲಕ ವಾಹನ ನೋಂದಣಿಯಾದ ವರ್ಷದ ಮಾಹಿತಿ ಪಡೆಯುತ್ತದೆ.