* ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯ ಹಗ್ಗ ಕಡಿದು ಉಸಿರಾಡುವಂತಾಗಿಸಲು ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಹೊಸ ನಿಯಮಗಳನ್ನು ಜಾರಿಗೊಳಿಸಿದ್ದಾರೆ.* ನವೆಂಬರ್ 1ರಿಂದ ಬಿಎಸ್-6 ಪ್ರಮಾಣಿತ ಸಿಎನ್ಜಿ ಹಾಗೂ ಎಲೆಕ್ಟ್ರಿಕ್ ಚಾಲಿತ ವಾಣಿಜ್ಯ ವಾಹನಗಳಿಗಷ್ಟೇ ದಿಲ್ಲಿಗೆ ಪ್ರವೇಶ ಅನುಮತಿಸಲಾಗುತ್ತದೆ.* ದಿಲ್ಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು, ಸರ್ಕಾರಿ ಯೋಜನೆಯಡಿಯಲ್ಲಿ ದಿಲ್ಲಿ ಮೆಟ್ರೊ ನಿಲ್ದಾಣಗಳಲ್ಲಿ 2,299 ಎಲೆಕ್ಟ್ರಿಕ್ ಆಟೋಗಳನ್ನು ನಿಯೋಜಿಸುವ ನಿಗದಿಯಾಗಿದೆ.* ಮಾಲ್ಗಳು, ಸಾರಿಗೆ ಹಬ್ಗಳು ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ 18,000 ಸಾರ್ವಜನಿಕ ಮತ್ತು ಅರ್ಧ ಸಾರ್ವಜನಿಕ ಇವಿ ಚಾರ್ಜಿಂಗ್ ಪಾಯಿಂಟ್ಗಳನ್ನು ಸ್ಥಾಪಿಸುವ ಯೋಜನೆಯಿದೆ.* ಈಗಿರುವ ಇವಿ ಮೂಲಸೌಕರ್ಯಗಳನ್ನು ನವೀಕರಿಸಲು ಕೂಡ ಸರ್ಕಾರ ಕ್ರಮ ಕೈಗೊಂಡಿದೆ.* ಹೊಗೆ ಉಗುಳುವ ವಾಹನಗಳು ದಿಲ್ಲಿಗೆ ಪ್ರವೇಶಿಸದಂತೆ ಸಿಸಿ ಕ್ಯಾಮೆರಾ ಮೂಲಕ ನಿಗಾವಹಿಸಲಾಗುತ್ತದೆ; ಜೊತೆಗೆ ಸರ್ಕಾರಿ ವಾಹನಗಳು ಶುದ್ಧ ಪೆಟ್ರೋಲ್ ಬಳಸಬೇಕೆಂದು ಸೂಚಿಸಲಾಗಿದೆ.* ಸಂರಕ್ಷಿತ ಹಾಗೂ ಅರಣ್ಯ ಪ್ರದೇಶಗಳಿಗೆ ಎಲೆಕ್ಟ್ರಿಕ್ ವಾಹನಗಳ ಪ್ರವೇಶವನ್ನಷ್ಟೇ ಅನುಮತಿಸಲಾಗುತ್ತದೆ.* ಪೆಟ್ರೋಲ್ ಪಂಪ್ಗಳಲ್ಲಿ ಉನ್ನತ ಮಟ್ಟದ ಸಿಸಿ ಕ್ಯಾಮೆರಾ ವ್ಯವಸ್ಥೆ ಸ್ಥಾಪಿಸಲು ನಿರ್ದೇಶನ ನೀಡಲಾಗಿದೆ. “ಇದು ತಾತ್ಕಾಲಿಕ ಪರಿಹಾರವಲ್ಲ. ನಾವು ದೀರ್ಘಾವಧಿಯ ನವೋದ್ಯಮ ಯೋಜನೆಗಳತ್ತ ಕಣ್ಣೆರೆಡುತ್ತಿದ್ದೇವೆ,'' ಎಂದು ಸಿಎಂ ರೇಖಾ ಗುಪ್ತಾ ತಿಳಿಸಿದ್ದಾರೆ.