* ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 15ನೇ ಶತಮಾನದ ಒಡಿಯಾ ಕವಿ ಆದಿಕಾಬಿ ಸರಳಾ ದಾಸ್ ಅವರ 600ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, 2024ರ ಕಳಿಂಗ ರತ್ನ ಪ್ರಶಸ್ತಿಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪ್ರದಾನ ಮಾಡಿದರು. * ಕಾರ್ಯಕ್ರಮವು ಕಟಕ್ನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಮುರ್ಮು ಅವರು ಭಾರತೀಯ ಭಾಷೆಗಳ ಮಹತ್ವವನ್ನು ಮತ್ತು ಮಾತೃಭಾಷೆಯಲ್ಲಿನ ಶಿಕ್ಷಣದ ಪ್ರಾಮುಖ್ಯತೆಯನ್ನು ಹೈಲೈಟ್ ಮಾಡಿದರು.* ಅವರು ರಾಷ್ಟ್ರೀಯ ಶಿಕ್ಷಣ ನೀತಿ-2020ಯನ್ನು ಪ್ರಸಂಶಿಸಿ, ಭಾಷೆಯ ವೈವಿಧ್ಯತೆಯ ನಡುವಿನ ಭಾರತೀಯ ಏಕತೆ ಬಗ್ಗೆ ಮಾತನಾಡಿದರು.* ಪ್ರಶಸ್ತಿ ಸ್ವೀಕರಿಸಿದ ಪ್ರಧಾನ್, ಈ ಗೌರವವನ್ನು ಒಡಿಯಾ ಜನತೆಗೆ ಅರ್ಪಿಸಿ, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಭಾಷಾ ಅಭಿವೃದ್ಧಿಗೆ ಶ್ರಮಿಸುವ ಅಗತ್ಯವಿದೆ ಎಂದು ತಿಳಿಸಿದರು.* ಅಲ್ಲದೇ, ಸರಳ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಬಿಜಯ ನಾಯಕ್ ಅವರನ್ನು ರಾಷ್ಟ್ರಪತಿ ಅಭಿನಂದಿಸಿದರು.