* ಭಾರತ ಮತ್ತು ಜಪಾನ್ ನಡುವಿನ 'ಧರ್ಮ ಗಾರ್ಡಿಯನ್' ಆರನೇ ಜಂಟಿ ಸಮರಾಭ್ಯಾಸವು ಫೆ. 25ರಿಂದ ಮಾರ್ಚ್ 9ರವರೆಗೆ ಜಪಾನ್ನ ಮೌಂಟ್ ಫ್ಯೂಜಿಯಲ್ಲಿ ನಡೆಯಲಿದೆ ಎಂದು ಭಾರತೀಯ ಸೇನೆ ತಿಳಿಸಿದೆ.* ಈ ಸಮರಾಭ್ಯಾಸವು ಜಂಟಿ ನಗರ ಯುದ್ಧ ಮತ್ತು ಭಯೋತ್ಪಾದನಾ ನಿಗ್ರಹದಲ್ಲಿ ಉಭಯ ಪಡೆಗಳ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ವಿಶ್ವಸಂಸ್ಥೆಯ ಸೂಚನೆಯಡಿ ನಡೆಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.* "ಸಿಒಎಎಸ್ ಜಪಾನ್ ಭೇಟಿಯ ಪ್ರಗತಿಯನ್ನು ಆಧರಿಸಿ, ಧರ್ಮ ಗಾರ್ಡಿಯನ್ 2025 ಭಾರತ-ಜಪಾನ್ ರಕ್ಷಣಾ ಸಹಕಾರವನ್ನು ಬಲಪಡಿಸಲಿದೆ" ಎಂದು ಅದು ತಿಳಿಸಿದೆ.* 'ಸೈಕ್ಲೋನ್' ಸಮರಾಭ್ಯಾಸವು ಭಾರತ ಮತ್ತು ಈಜಿಪ್ಟ್ನಲ್ಲಿ ಪರ್ಯಾಯವಾಗಿ ನಡೆಯುವ ವಾರ್ಷಿಕ ಕಾರ್ಯಕ್ರಮವಾಗಿದೆ. 2024ರ ಜನವರಿಯಲ್ಲಿ ಇದು ಈಜಿಪ್ಟ್ನಲ್ಲಿ ನಡೆದಿತ್ತು.* ಭಾರತೀಯ 25 ಜನ ಸಿಬ್ಬಂದಿಯ ತುಕಡಿಯನ್ನು ಎರಡು ವಿಶೇಷ ಪಡೆಗಳ ಬೆಟಾಲಿಯನ್ ಪ್ರತಿನಿಧಿಸುತ್ತವೆ. ಈಜಿಪ್ಟ್ 25 ಜನ ಸಿಬ್ಬಂದಿಯ ತುಕಡಿಯನ್ನು ವಿಶೇಷ ಪಡೆಗಳ ಗುಂಪು ಮತ್ತು ವಿಶೇಷ ಕಾರ್ಯಪಡೆ ಪ್ರತಿನಿಧಿಸುತ್ತವೆ.* ಈ ಸಮರಾಭ್ಯಾಸವು ವಿಶೇಷ ಕಾರ್ಯಾಚರಣೆ ತಂತ್ರಗಳ ಪರಸ್ಪರ ಕಾರ್ಯಸಾಧ್ಯತೆ, ಜಂಟಿ ಕಾರ್ಯಾಚರಣೆ ಮತ್ತು ಮಾಹಿತಿ ವಿನಿಮಯವನ್ನು ಹೆಚ್ಚಿಸುವ ಮೂಲಕ ಉಭಯ ದೇಶಗಳ ಮಿಲಿಟರಿ ಸಂಬಂಧವನ್ನು ಬಲಪಡಿಸಲು ಉದ್ದೇಶಿಸಲಾಗಿದೆ.* ಈ ಸಮರಾಭ್ಯಾಸವು 48 ಗಂಟೆಗಳ ಮೌಲ್ಯಮಾಪನದೊಂದಿಗೆ ಮರುಭೂಮಿ ಹಾಗೂ ಅರೆಮರುಭೂಮಿ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಯುದ್ಧತಂತ್ರಗಳ ಪೂರ್ವಾಭ್ಯಾಸಕ್ಕೆ ಸಮಾಪ್ತಿಯಾಗಿದೆ. ಇದರಲ್ಲಿ ಸ್ಥಳೀಯ ಮಿಲಿಟರಿ ಉಪಕರಣಗಳ ಪ್ರದರ್ಶನ ಹಾಗೂ ಈಜಿಪ್ಟ್ ರಕ್ಷಣಾ ಉತ್ಪಾದನಾ ಉದ್ಯಮದ ಅವಲೋಕನವೂ ಒಳಗೊಂಡಿದೆ.