* ದೇಶದ ಮಹತ್ವಕಾಂಕ್ಷಿ ಆರೋಗ್ಯ ಯೋಜನೆಯಾದ ಆಯುಷ್ಮಾನ್ ಭಾರತ್ ಇದೀಗ ದೆಹಲಿಯಲ್ಲಿ ಮೊದಲ ಬಾರಿಗೆ ಜಾರಿಗೆ ಬರಲಿದೆ.* ಈ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಮೊದಲ ಬಾರಿಗೆ ಒಪ್ಪಂದವಾಗಿದ್ದು, ಈ ಮೂಲಕ ದೆಹಲಿ ಆಯುಷ್ಮಾನ್ ಯೋಜನೆ ಜಾರಿಗೆ ತಂದ ದೇಶದ 35ನೇ ರಾಜ್ಯ/ಕೇಂದ್ರಾಡಳಿತ ಪ್ರದೇಶವಾಗಿದೆ.* ಈ ಯೋಜನೆಯಡಿ ದೆಹಲಿಯ ಅರ್ಹ ಕುಟುಂಬಗಳಿಗೆ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು 5 ಲಕ್ಷ ರೂ. ನೆರವು ನೀಡಲಿದ್ದು, ಇದಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರವೂ 5 ಲಕ್ಷ ರೂ. ನೀಡಲಿದೆ. ಒಟ್ಟು 10 ಲಕ್ಷ ರೂ. ವರೆಗೆ ನಗದು ರಹಿತ ಚಿಕಿತ್ಸೆಗೆ ಅವಕಾಶ ಸಿಗಲಿದೆ.* ಒಪ್ಪಂದಕ್ಕೆ ಸಹಿ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ದೆಹಲಿ ಮುಖ್ಯಮಂತ್ರಿ ರೇಖಾ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.* ಈ ಹಿಂದೆ ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರ ಆಯುಷ್ಮಾನ್ ಯೋಜನೆಯ ಜಾರಿಗೆ ವಿರೋಧ ವ್ಯಕ್ತಪಡಿಸಿತ್ತು. ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಯೋಜನೆಯನ್ನು 'ದೇಶದ ದೊಡ್ಡ ಹಗರಣ' ಎಂದು ಕರೆದು ಜಾರಿಗೆ ವಿರತರಾಗಿದ್ದರು.* ಪ್ರಸ್ತುತ ಪಶ್ಚಿಮ ಬಂಗಾಳವೊಂದೇ ಈ ಯೋಜನೆಯ ಜಾರಿಗೆ ಬಾಕಿಯಿರುವ ರಾಜ್ಯವಾಗಿದೆ.