* ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಆಗಸ್ಟ್ 17ರಂದು ಮಧ್ಯಾಹ್ನ 12:30ರ ಸುಮಾರಿಗೆ ದೆಹಲಿಯ ರೋಹಿಣಿಯಲ್ಲಿ ಸುಮಾರು 11,000 ಕೋಟಿ ರೂ.ಗಳ ಸಂಯೋಜಿತ ವೆಚ್ಚದ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. * ಈ ಯೋಜನೆಗಳಲ್ಲಿ ದ್ವಾರಕಾ ಎಕ್ಸ್ಪ್ರೆಸ್ವೇಯ ದೆಹಲಿ ವಿಭಾಗ ಮತ್ತು ನಗರ ವಿಸ್ತರಣಾ ರಸ್ತೆ-II (UER-II) ಸೇರಿವೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.* ದ್ವಾರಕಾ ಎಕ್ಸ್ಪ್ರೆಸ್ವೇಯ 10.1 ಕಿಲೋಮೀಟರ್ ಉದ್ದದ ದೆಹಲಿ ವಿಭಾಗವನ್ನು 5 ಸಾವಿರದ 300 ಕೋಟಿ ರೂಪಾಯಿಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವಿಭಾಗವು ಯಶೋಭೂಮಿ, DMRC ನೀಲಿ ಮತ್ತು ಕಿತ್ತಳೆ ಮಾರ್ಗಗಳು, ಮುಂಬರುವ ಬಿಜ್ವಾಸನ್ ರೈಲು ನಿಲ್ದಾಣ ಮತ್ತು ದ್ವಾರಕಾ ಕ್ಲಸ್ಟರ್ ಬಸ್ ಡಿಪೋಗೆ ಬಹು-ಮಾದರಿ ಸಂಪರ್ಕವನ್ನು ಒದಗಿಸುತ್ತದೆ.- ಈ ವಿಭಾಗವು ಇವುಗಳನ್ನು ಒಳಗೊಂಡಿದೆ:• ಪ್ಯಾಕೇಜ್ 1: ಶಿವಮೂರ್ತಿ ಜಂಕ್ಷನ್ ನಿಂದ ದ್ವಾರಕಾ ಸೆಕ್ಟರ್ -21ರ ರೋಡ್ ಅಂಡರ್ ಬ್ರಿಡ್ಜ್ (ಆರ್.ಯು.ಬಿ) ವರೆಗೆ 5.9 ಕಿ.ಮೀ.• ಪ್ಯಾಕೇಜ್ 2: ದ್ವಾರಕಾ ಸೆಕ್ಟರ್ -21 ಆರ್.ಯು.ಬಿಯಿಂದ ದೆಹಲಿ-ಹರಿಯಾಣ ಗಡಿಯವರೆಗೆ 4.2 ಕಿ.ಮೀ, ನಗರ ವಿಸ್ತರಣಾ ರಸ್ತೆ -2 ಗೆ ನೇರ ಸಂಪರ್ಕವನ್ನು ಒದಗಿಸುತ್ತದೆ.* ದ್ವಾರಕಾ ಎಕ್ಸ್ ಪ್ರೆಸ್ ವೇಯ 19 ಕಿ.ಮೀ ಉದ್ದದ ಹರಿಯಾಣ ವಿಭಾಗವನ್ನು ಈ ಹಿಂದೆ ಮಾರ್ಚ್ 2024 ರಲ್ಲಿ ಪ್ರಧಾನಮಂತ್ರಿ ಉದ್ಘಾಟಿಸಿದರು.