* 'ಎಜುಕೇಟ್ ಗರ್ಲ್ಪ್' ಸಂಸ್ಥೆಯ ಸ್ಥಾಪಕಿ ದೆಹಲಿಯ ಸಫೀನಾ ಹುಸೇನರಿಗೆ ಪ್ರತಿಷ್ಠಿತ 'ವೈಸ್' (ವರ್ಲ್ಡ್ ಇನ್ನೋವೇಶನ್ ಸಮ್ಮಿಟ್ ಫಾರ್ ಎಜುಕೇಷನ್) ಪ್ರಶಸ್ತಿ ಲಭಿಸಿದೆ.* ಭಾರತದ ವಿವಿಧ ಗ್ರಾಮಗಳಲ್ಲಿ ಶಾಲೆಯಿಂದ ಹೊರಗುಳಿದಿದ್ದ ಸುಮಾರು 14 ಲಕ್ಷ ಬಾಲಕಿಯರನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದರಲ್ಲಿ ಮಾಡಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.* ಕತಾರ್ ಫೌಂಡೇಷನ್ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. ಈ ಪ್ರಶಸ್ತಿಯು 4.16 ಕೋಟಿ (5 ಲಕ್ಷ ಡಾಲರ್) ಒಳಗೊಂಡಿದ್ದು. ದೋಹಾದಲ್ಲಿ ನಡೆದ 'ವೈಸ್‌ನ 11ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.* ಸಫೀನಾ ಈ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ಭಾರತೀಯರು. ಹಿಂದೆ, ನಿರ್ಲಕ್ಷಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಕಾರ್ಯಕ್ರಮಕ್ಕಾಗಿ 'ಪ್ರಥಮ್' ಸಹ ಸ್ಥಾಪಕ ಮಾಧವ್ ಚವಾಣ್ ಅವರಿಗೆ 2012ರಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದರು.* 16 ವರ್ಷಗಳ ಹಿಂದೆ 'ಎಜುಕೇಟ್ ಗರ್ಲ್ಸ್ ಸಂಸ್ಥೆ ಸ್ಥಾಪಿಸಿದೆ. ಆಗಿನ್ನೂ 'ಬೇಟಿ ಬಚಾವೊ, ಬೇಟಿ ಪಡಾವೊ' ಇರಲಿಲ್ಲ. ಶಿಕ್ಷಣ ವಂಚಿತ ಬಾಲಕಿಯರನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವುದೇ ಉದ್ದೇಶವಾಗಿತ್ತು' ಎಂದು ಸಫೀನಾ ಅವರು ತಿಳಿಸಿದರು.