Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಮಿಲನ್-2026: ವಿಶಾಖಪಟ್ಟಣಂನಲ್ಲಿ ವಿಶ್ವದ ಬೃಹತ್ ನೌಕಾ ಸಮರಾಭ್ಯಾಸಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ
Authored by:
Akshata Halli
Date:
21 ಫೆಬ್ರುವರಿ 2026
➤
ಭಾರತೀಯ ನೌಕಾಪಡೆಯು ಆಯೋಜಿಸುವ ಪ್ರತಿಷ್ಠಿತ ಬಹುಪಕ್ಷೀಯ ನೌಕಾ ಸಮರಾಭ್ಯಾಸ
'ಮಿಲನ್-2026' (MILAN-2026)
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಅದ್ಧೂರಿಯಾಗಿ ಆರಂಭವಾಗಿದೆ. ಫೆಬ್ರವರಿ 25ರವರೆಗೆ ನಡೆಯಲಿರುವ ಈ ಜಾಗತಿಕ ವೇದಿಕೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಿದರು. ಇದು ಭಾರತದ
'Act East Policy'
ಮತ್ತು
'MAHASAGAR'
(Mutual and Holistic Advancement for Security and Growth Across Regions) ದೃಷ್ಟಿಕೋನದ ಮಹತ್ವದ ಭಾಗವಾಗಿದೆ.
➤
ಧ್ಯೇಯವಾಕ್ಯ (Theme):
ಸೌಹಾರ್ದತೆ, ಸಹಕಾರ ಮತ್ತು ಸಹಯೋಗ
'Camaraderie, Cooperation, and Collaboration'
➤
ಭಾರತೀಯ ನೌಕಾಪಡೆಯ ಪೂರ್ವ ನೌಕಾ ಕಮಾಂಡ್ ಕೇಂದ್ರವಾದ ವಿಶಾಖಪಟ್ಟಣಂನಲ್ಲಿ ಜರ್ಮನಿ, ಫಿಲಿಪೀನ್ಸ್ ಮತ್ತು ಯುಎಇ ಸೇರಿದಂತೆ ದಾಖಲೆಯ 74 ರಾಷ್ಟ್ರಗಳ ಸಹಭಾಗಿತ್ವದೊಂದಿಗೆ ನಡೆಯುತ್ತಿರುವ
ಮಿಲನ್-2026 (MILAN-2026)
ಸಮರಾಭ್ಯಾಸವು, 1995ರಲ್ಲಿ ಕೇವಲ 4 ರಾಷ್ಟ್ರಗಳಿಂದ ಆರಂಭವಾಗಿ ಇಂದು 13ನೇ ಆವೃತ್ತಿಗೆ ತಲುಪಿರುವ ವಿಶ್ವದ ಪ್ರಮುಖ ಬಹುಪಕ್ಷೀಯ ನೌಕಾ ಶಕ್ತಿ ಪ್ರದರ್ಶನವಾಗಿದೆ.
➤
ಆಸಿಯಾನ್ (ASEAN) ಜೊತೆಗಿನ ಸಂಬಂಧ ಮತ್ತು ರಕ್ಷಣಾ ಸಹಕಾರ:
ಸಮರಾಭ್ಯಾಸದ ನಡುವೆ ರಕ್ಷಣಾ ಸಚಿವರು 9 ಆಸಿಯಾನ್ ರಾಷ್ಟ್ರಗಳ ನೌಕಾ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿದರು.ಇಂಡೋ-ಪೆಸಿಫಿಕ್ ವಲಯದಲ್ಲಿ ಭಾರತವು ಆಸಿಯಾನ್ ರಾಷ್ಟ್ರಗಳಿಗೆ ಕೇಂದ್ರ ಸ್ತಂಭವಾಗಿದೆ.ಭಾರತದಲ್ಲಿ ತಯಾರಾದ
INS ವಿಕ್ರಾಂತ್
(ವಿಮಾನವಾಹಕ ನೌಕೆ) ಮತ್ತು
ವಿಶಾಖಪಟ್ಟಣಂ ಕ್ಲಾಸ್ ಡಿಸ್ಟ್ರೋಯರ್ಗಳ
ತಂತ್ರಜ್ಞಾನವನ್ನು ಬಳಸಿಕೊಳ್ಳಲು ರಕ್ಷಣಾ ಸಚಿವರು ಆಸಿಯಾನ್ ರಾಷ್ಟ್ರಗಳಿಗೆ ಆಹ್ವಾನ ನೀಡಿದ್ದಾರೆ.ಆಸಿಯಾನ್-ಭಾರತ ರಕ್ಷಣಾ ಥಿಂಕ್-ಟ್ಯಾಂಕ್' ಸ್ಥಾಪನೆ ಮತ್ತು ಯುವ ನೌಕಾ ಅಧಿಕಾರಿಗಳ ನಡುವೆ ವಿನಿಮಯ ಕಾರ್ಯಕ್ರಮಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
➤
ಸಮರಾಭ್ಯಾಸದ ಪ್ರಮುಖ ಕಾರ್ಯಾಚರಣೆಗಳು:
ಸಮುದ್ರದ ಹಂತದಲ್ಲಿ (Sea Phase) ಅತ್ಯಂತ ಸಂಕೀರ್ಣವಾದ ಯುದ್ಧ ತಂತ್ರಗಳನ್ನು ಪ್ರದರ್ಶಿಸಲಾಗುತ್ತದೆ:
- Anti-Submarine Warfare (ASW): ಜಲಾಂತರ್ಗಾಮಿ ವಿರೋಧಿ ಯುದ್ಧ ತಂತ್ರಗಳು.
- Air Defence: ಶತ್ರುಗಳ ವಾಯುದಾಳಿಯನ್ನು ಎದುರಿಸುವ ತಾಲೀಮು.
- Search and Rescue: ಸಮುದ್ರದಲ್ಲಿ ಸಂಕಷ್ಟದಲ್ಲಿರುವವರ ರಕ್ಷಣೆ.
- Counter-Piracy: ಕಡಲ್ಗಳ್ಳತನ ಮತ್ತು ಕಡಲ ಭಯೋತ್ಪಾದನೆಯನ್ನು ತಡೆಯುವ ಕಾರ್ಯಚರಣೆ.
➤
ಮಿಲನ್ ಗ್ರಾಮ (MILAN Village):
ನೌಕಾಪಡೆಯು ವಿಶಾಖಪಟ್ಟಣಂನಲ್ಲಿ 'ಮಿಲನ್ ಗ್ರಾಮ'ವನ್ನು ನಿರ್ಮಿಸಿದೆ. ಇದು ಕೇವಲ ಸೌಲಭ್ಯಗಳ ಕೇಂದ್ರವಲ್ಲದೆ, ಭಾಗವಹಿಸುವ ದೇಶಗಳ ನಡುವೆ
ಸಾಂಸ್ಕೃತಿಕ ವಿನಿಮಯ
ಕ್ಕೆ ವೇದಿಕೆಯಾಗಿದೆ. ಇಲ್ಲಿ ಭಾರತದ ವೈವಿಧ್ಯಮಯ ಪರಂಪರೆ ಮತ್ತು ಆಹಾರ ಪದ್ಧತಿಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲಾಗುತ್ತದೆ.
Take Quiz
Loading...