* ಸೈಬರ್ ಅಪರಾಧಗಳ ವಿರುದ್ಧ ಪರಿಣಾಮಕಾರಿ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಪ್ರತ್ಯೇಕ ಸೈಬರ್ ತನಿಖಾ ಘಟಕವನ್ನು ಸ್ಥಾಪಿಸಿದೆ.* ಘಟಕದ ಡಿಐಜಿಯಾಗಿ ಭೂಷಣ್ ಬೊರೆಸೆ ನೇಮಕವಾಗಿದ್ದು, ಮುಖ್ಯಸ್ಥರಾಗಿ ಪ್ರಣವ್ ಮೊಹಂತಿಗೆ ಹೊಣೆಗಾರಿಕೆ ನೀಡಲಾಗಿದೆ. ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಪ್ರಸ್ತಾವನೆ ಮೇರೆಗೆ ಈ ಘಟಕ ಆರಂಭವಾಗಿದೆ.* ಘಟಕದ ಸ್ಥಾಪನೆಗೆ ಪೊಲೀಸ್ ಇಲಾಖೆ 372 ಕೋಟಿ ಅನುದಾನವನ್ನು ಕೋರಿದ್ದು, ಪ್ರಾಥಮಿಕ ಹಂತದಲ್ಲಿ ಸರ್ಕಾರ 5 ಕೋಟಿ ಬಿಡುಗಡೆ ಮಾಡಿದೆ. ಈ ಮೊತ್ತವನ್ನು ಸೈಬರ್ ಲ್ಯಾಬ್ ಹಾಗೂ ತಾಂತ್ರಿಕ ಉಪಕರಣಗಳ ಖರೀದಿಗೆ ಬಳಸಲಾಗುತ್ತದೆ.* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಪೊಲೀಸ್ ಧ್ವಜ ದಿನಾಚರಣೆ’ ವೇಳೆ ಮಾತನಾಡಿ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯು ಹೂಡಿಕೆ, ಉದ್ಯೋಗ ಸೃಷ್ಟಿಗೆ ಆಧಾರವಾಗಿದ್ದು, ಪೊಲೀಸ್ ಇಲಾಖೆ ಸಮಾಜದಲ್ಲಿ ನೆಮ್ಮದಿ ನಿರ್ಮಿಸಲು ಮಹತ್ವದ ಪಾತ್ರ ವಹಿಸಬೇಕು ಎಂದರು.