Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ದೇಶದಲ್ಲೇ ಮೊದಲ ಹೆಜ್ಜೆ: ಕರ್ನಾಟಕದಲ್ಲಿ 'ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ' ಅಧಿಕೃತವಾಗಿ ಸ್ಥಾಪನೆ
Authored by:
Akshata Halli
Date:
29 ಜನವರಿ 2026
➤
ಬೆಂಗಳೂರು:
ಸ್ವಿಗ್ಗಿ, ಜೊಮ್ಯಾಟೊ, ಉಬರ್ ಮತ್ತು ಅಮೆಜಾನ್ನಂತಹ ಆನ್ಲೈನ್ ವೇದಿಕೆಗಳಲ್ಲಿ ಹಗಲಿರುಳು ಶ್ರಮಿಸುವ ಗಿಗ್ ಕಾರ್ಮಿಕರಿಗೆ (Gig Workers) ಕರ್ನಾಟಕ ಸರ್ಕಾರವು ಬಂಪರ್ ಕೊಡುಗೆ ನೀಡಿದೆ. ಜನವರಿ 27, 2026 ರಂದು ಅಧಿಕೃತವಾಗಿ
'ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಮಂಡಳಿ
'ಯನ್ನು ರಚಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಗಿಗ್ ಕಾರ್ಮಿಕರಿಗಾಗಿ ಪ್ರತ್ಯೇಕ ಕಾನೂನುಬದ್ಧ ಮಂಡಳಿ ಸ್ಥಾಪಿಸಿದ ಭಾರತದ ಮೊದಲ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿ ನಿಂತಿದೆ.
➤ ಮಂಡಳಿಯ ರಚನೆ ಮತ್ತು ಸದಸ್ಯರು:
ಈ ಮಂಡಳಿಯು ಒಟ್ಟು
16 ಸದಸ್ಯರನ್ನು
ಒಳಗೊಂಡಿದ್ದು, ಕೆಳಗಿನಂತೆ ಸಂಯೋಜನೆಗೊಂಡಿದೆ:
1.
ಅಧ್ಯಕ್ಷರು:
ಕಾರ್ಮಿಕ ಸಚಿವರು (ಪದನಿಮಿತ್ತ ಅಧ್ಯಕ್ಷರು - ಪ್ರಸ್ತುತ ಸಂತೋಷ್ ಲಾಡ್).
2.
ಸದಸ್ಯ ಕಾರ್ಯದರ್ಶಿ:
ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO).
3.
ಸರ್ಕಾರಿ ಪ್ರತಿನಿಧಿಗಳು:
ಕಾರ್ಮಿಕ ಇಲಾಖೆ, ಐಟಿ-ಬಿಟಿ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು.
4.
ಇತರ ಸದಸ್ಯರು:
- ಗಿಗ್ ಕಾರ್ಮಿಕರ ಸಂಘಗಳಿಂದ 4 ಪ್ರತಿನಿಧಿಗಳು.
-
ಅಗ್ರಿಡೇಟರ್ ಪ್ಲಾಟ್ಫಾರ್ಮ್ಗಳಿಂದ (ಜೊಮ್ಯಾಟೊ, ಅಮೆಜಾನ್, ಉಬರ್ ಇತ್ಯಾದಿ) 4 ಪ್ರತಿನಿಧಿಗಳು.
-
ಗಿಗ್ ಆರ್ಥಿಕತೆಯ ಇಬ್ಬರು ತಜ್ಞರು ಮತ್ತು ಒಬ್ಬ ತಾಂತ್ರಿಕ ತಜ್ಞರು.
➤ ಕಲ್ಯಾಣ ನಿಧಿ ಮತ್ತು ಶುಲ್ಕ (Welfare Fee):
=> ಅಗ್ರಿಡೇಟರ್ ಸಂಸ್ಥೆಗಳು ಪ್ರತಿ ವಹಿವಾಟಿನ ಮೇಲೆ
ಶೇ. 1 ರಿಂದ 1.5 ರಷ್ಟು
ಕಲ್ಯಾಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
=>
ಭವಿಷ್ಯದಲ್ಲಿ ನಿಧಿಯ ಕೊರತೆಯಾದಲ್ಲಿ ಈ ಶುಲ್ಕವನ್ನು ಗರಿಷ್ಠ
ಶೇ. 5 ರವರೆಗೆ
ಹೆಚ್ಚಿಸುವ ಅವಕಾಶವಿದೆ.
=>
ಅಗ್ರಿಡೇಟರ್ಗಳು ತಮ್ಮಲ್ಲಿ ನೋಂದಾಯಿತವಾಗಿರುವ ಎಲ್ಲಾ ಕಾರ್ಮಿಕರ ಮಾಹಿತಿಯನ್ನು
45 ದಿನಗಳೊಳಗೆ
ಮಂಡಳಿಗೆ ಸಲ್ಲಿಸುವುದು ಕಡ್ಡಾಯವಾಗಿದೆ.
➤ ಮಂಡಳಿಯ ಪ್ರಮುಖ ಉದ್ದೇಶಗಳು:
=>
ಗಿಗ್ ಕಾರ್ಮಿಕರಿಗೆ (ಉದಾ: ಝೊಮ್ಯಾಟೊ, ಸ್ವಿಗ್ಗಿ, ಉಬರ್ ಚಾಲಕರು ಇತ್ಯಾದಿ) ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕ್ರಮಗಳನ್ನು ಜಾರಿಗೆ ತರುವುದು.
=>
ಅಗ್ರಿಡೇಟರ್ಗಳಿಂದ (Aggregators) ಕಲ್ಯಾಣ ಶುಲ್ಕವನ್ನು ಸಂಗ್ರಹಿಸುವುದು.
=>
ಎಲ್ಲಾ ಗಿಗ್ ಕಾರ್ಮಿಕರಿಗೆ
ವಿಶಿಷ್ಟ ಗುರುತಿನ ಸಂಖ್ಯೆ (Unique ID)
ನೀಡುವುದು.
➤
ಗಿಗ್ ಕಾರ್ಮಿಕರು (Gig Workers)
ಎಂದರೆ ಯಾವುದೇ ಒಂದು ಕಂಪನಿಯಲ್ಲಿ ಖಾಯಂ ಉದ್ಯೋಗಿಯಾಗಿರದೆ, ಆನ್ಲೈನ್ ವೇದಿಕೆಗಳ (ಉದಾಹರಣೆಗೆ ಝೊಮ್ಯಾಟೊ, ಸ್ವಿಗ್ಗಿ, ಉಬರ್) ಮೂಲಕ ಸ್ವತಂತ್ರವಾಗಿ ಅಥವಾ ಅಲ್ಪಾವಧಿಯ ಒಪ್ಪಂದದ ಆಧಾರದ ಮೇಲೆ ಕೆಲಸ ಮಾಡುವ ವ್ಯಕ್ತಿಗಳು.
ಜನವರಿ 27ರ ಪ್ರಚಲಿತ ಘಟನೆಗಳ ಆಧಾರಿತ ಕ್ವಿಜ್ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
Take Quiz
Loading...