* ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್ ಲಿಮಿಟೆಡ್ (NPCIL) ದೇಶದ ವಿವಿಧ ರಾಜ್ಯಗಳಲ್ಲಿ 20 ಹೊಸ ಅಣುಶಕ್ತಿ ಘಟಕಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ. ಈ ಯೋಜನೆಗೆ ಸ್ಥಳ ಆಯ್ಕೆ ಮಾಡುತ್ತಿರುವಾಗ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಜಮೀನು ಸಿದ್ಧವಾಗಿದೆ.* ಇದೀಗ 700 ಮೆಗಾವಾಟ್ ಸಾಮರ್ಥ್ಯದ 10 ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಕರ್ನಾಟಕದ ಕೈಗಾ ಸ್ಥಾವರದಲ್ಲಿ 5, 6ನೇ ಘಟಕ, ಹರಿಯಾಣದ ಗೋರಖಪುರ, ಮಧ್ಯಪ್ರದೇಶದ ಚುಟ್ಕಾ ಮತ್ತು ರಾಜಸ್ಥಾನದ ಮಹಿ ಬನ್ನವಾರಾ ಸ್ಥಾವರಗಳಲ್ಲಿ ಘಟಕಗಳ ನಿರ್ಮಾಣ ನಡೆದಿದೆ.* ಕೈಗಾದ 5, 6ನೇ ಘಟಕಗಳು ನೀರಿನ ಪುನರ್ ಬಳಕೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಿವೆ. ಇದು ನದಿಯಿಂದ ನೀರನ್ನು ಒಂದೇ ಬಾರಿ ಬಳಸಿಕೊಂಡು ಮತ್ತೆ ಪುನಃ ಶೀತೀಕರಣದ ಮೂಲಕ ವಿದ್ಯುತ್ ಉತ್ಪಾದನೆಗೆ ಬಳಸುವ ತಂತ್ರಜ್ಞಾನ.* ಕೈಗಾ ಘಟಕಗಳ ತಳಪಾಯ ಕಾಮಗಾರಿ ಪೂರ್ಣವಾಗಿದೆ. ಬೃಹತ್ ಯಂತ್ರಗಳ ಅಳವಡಿಕೆ 2027ರಿಂದ ಆರಂಭವಾಗಲಿದೆ. 5ನೇ ಘಟಕ 2030 ಅಕ್ಟೋಬರ್ನಲ್ಲಿ, 6ನೇ ಘಟಕ 2031ರಲ್ಲಿ ಕಾರ್ಯಾರಂಭ ಮಾಡಲಿದೆ.* ಟರ್ಬೈನ್ ನಿರ್ಮಾಣ ಕಾರ್ಯ ಬಿಎಚ್ಇಎಲ್ಗೆ ನೀಡಲಾಗಿದೆ. 5, 6ನೇ ಘಟಕಗಳ ನಿರ್ಮಾಣಕ್ಕೆ ₹21,000 ಕೋಟಿ ವೆಚ್ಚವಾಗಿದೆ. 390 ಹೊಸ ನೇಮಕಾತಿಗಳ ಪ್ರಕ್ರಿಯೆ ಪ್ರಾರಂಭವಾಗಿದೆ.* ಬಂದ್ ಮಾಡಿದ್ದ 1ನೇ ಘಟಕವನ್ನು 2026 ಅಕ್ಟೋಬರ್ 30 ರಂದು ಮರು ಆರಂಭ ಮಾಡಲಾಗುತ್ತದೆ. ನಂತರ 2ನೇ ಘಟಕವನ್ನು ಪುನಶ್ಚೇತನಕ್ಕಾಗಿ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ.