* ದೇಶದ ಮೊದಲ ಬಾಹ್ಯಾಕಾಶ ತರಬೇತಿ ಕೇಂದ್ರವನ್ನು ಮುಂಬೈನಲ್ಲಿ ಏಷ್ಯಾದ ಮೊದಲ ಬಾಹ್ಯಾಕಾಶ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲು ಮುಂದಾಗಿದೆ.* ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ನಡೆಸಬೇಕು ಎಂಬ ಕನಸನ್ನು ಇಸ್ರೋ ಹೊತ್ತಿರುವಾಗಲೇ ಮುಂಬೈನಲ್ಲಿ ಏಷ್ಯಾದ ಮೊದಲ ಬಾಹ್ಯಾಕಾಶ ತರಬೇತಿ ಕೇಂದ್ರ ಸ್ಥಾಪನೆ ಬಗ್ಗೆ ಚಿಂತನೆ ನಡೆದಿದೆ. ಆಯಸ್ಟ್ರೋಬೋರ್ನ್ ಏರೋಸ್ಪೇಸ್‌ ಎಂಬ ಕಂಪನಿ ಈ ಸಾಹಸಕ್ಕೆ ಕೈ ಹಾಕಿದೆ.* ಈ ಸಂಸ್ಥೆ ದೇಶದ ಮೊದಲ ಆರು ಸೀಟುಗಳ ಸಾಮರ್ಥ್ಯದ ವಾಣಿಜ್ಯಿಕವ್ಯೋಮ ವಿಮಾನ ಐರಾವತವನ್ನು ಅಭಿವೃದ್ಧಿಪಡಿಸುತ್ತಿದೆ.* 1965 ಥಂಬಾದಲ್ಲಿ ಬಾಹ್ಯಾಕಾಶ ವಿಜ್ಞಾನ ತಂತ್ರ ಜ್ಞಾನ ಕೆಂದ್ರ ಸ್ಥಾಪನೆ. 1969 ಆಗಸ್ಟ 15 ಪರಮಾಣು ಇಂಧನ ಇಲಾಖೆಯಿಂದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸ್ಥಾಪನೆ. 1972 ಆಂದ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಸತೀಶ್'ಧವನ್'ಬಾಹ್ಯಾಕಾಶ ಕೇಂದ್ರ ಸ್ಥಾಪನೆ.* 18-24 ತಿಂಗಳ ಅವಧಿ ತರಬೇತಿ ಕೇಂದ್ರ ಸಿದ್ಧವಾಗಲಿದೆ. ಅಲ್ಲಿ ಖಾಸಗಿ ಮತ್ತು ಸರ್ಕಾರಿ ಕ್ಷೇತ್ರದ ಪರಿಣತರಿಂದ ಬಾಹ್ಯಾಕಾಶ ಯಾನಕ್ಕೆ ತರಬೇತಿ ನೀಡಲಾಗುತ್ತದೆ. * ತರಬೇತಿ ಕೇಂದ್ರ ಸ್ಥಾಪನೆ ಮಾಡುವ ನಿಟ್ಟಿನಲ್ಲಿ 1.5 ಎಕರೆ ಜಮೀನು ಅಗತ್ಯವಿದ್ದು, ಅದಕ್ಕಾಗಿ ಮಹಾರಾಷ್ಟ್ರ ಸರ್ಕಾರದ ಜತೆಗೆ ಮಾತುಕತೆ ನಡೆಸಲಾಗುತ್ತಿದೆ.