* ದೇಶದ ಮೊದಲ ಎರಡು ಅತ್ಯಾಧುನಿಕ 3 ನ್ಯಾನೋಮೀಟರ್ ಚಿಪ್ ವಿನ್ಯಾಸ ಕೇಂದ್ರಗಳನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಿದರು.* ಬೆಂಗಳೂರು ಮತ್ತು ನೊಯ್ದಾದಲ್ಲಿ ಸ್ಥಾಪಿಸಲಾದ ಈ ಚಿಪ್ ವಿನ್ಯಾಸ ಕೇಂದ್ರಗಳಿಗೆ ಚಾಲನೆ ನೀಡಿದ ಸಚಿವರು ''ಭಾರತವನ್ನು ಸೆಮಿಕಂಡಕ್ಟರ್ ನಾವೀನ್ಯತೆಯಲ್ಲಿ ಮುಂಚೂಣಿಗೆ ತರಲು ಇದು ಮಹತ್ತರ ಹೆಜ್ಜೆ'' ಎಂದು ಹೇಳಿದರು.* ರೆನೆಸಾಸ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿಪಡಿಸಿದ ಈ ಕೇಂದ್ರಗಳು, ದೇಶದ ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ಹೊಸ ವೇಗ ನೀಡಲಿವೆ.* ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಹಾರ್ಡ್ವೇರ್ ನೈಪುಣ್ಯವನ್ನು ಬೆಳೆಸಲು ಉದ್ದೇಶಿಸಿದ ಹೊಸ ಸೆಮಿಕಂಡಕ್ಟರ್ ಕಲಿಕಾ ಕಿಟ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.* ''ಭಾರತವು ನಮ್ಮ ಸಂಸ್ಥೆಯ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ಎಂಬೆಡೆಡ್ ಸಿಸ್ಟಮ್, ಸಾಫ್ಟ್ವೇರ್ ಮತ್ತು ಸಿಸ್ಟಮ್ ನಾವೀನ್ಯತೆಯಲ್ಲಿ ಪೈವೇಟ್ ಭಾರತದಲ್ಲಿ ತನ್ನ ಪಾತ್ರವನ್ನು ವಿಸ್ತರಿಸುತ್ತಿದೆ'' ಎಂದು ರೆನೆಸಾಸ್ ವಿನ್ಯಾಸ ಎಲೆಕ್ಟ್ರಾನಿಕ್ಸ್ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹಿಡೆಟೋಶಿ ಶಿಬಾಟಾ ಹೇಳಿದರು.