* ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (UNFPA) ಬಿಡುಗಡೆ ಮಾಡಿರುವ 2025ರ ವರಿದಿಯ ಪ್ರಕಾರ, ಭಾರತದ ಜನಸಂಖ್ಯೆ 146 ಕೋಟಿಗೆ ತಲುಪಿದೆ, ಇದು ಜಗತ್ತಿನಲ್ಲೇ ಗರಿಷ್ಠವಾಗಿದೆ.* 1960ರ ದಶಕದಲ್ಲಿ 43.60 ಕೋಟಿಯಷ್ಟಿದ್ದ ಜನಸಂಖ್ಯೆಯು ಮುಂದಿನ ನಾಲ್ಕು ದಶಕಗಳಲ್ಲಿ 170 ಕೋಟಿಗೆ ಏರಿಕೆಯಾಗಬಹುದು ಎನ್ನಲಾಗಿದೆ. ಆದರೆ, ಬಳಿಕ ಇದು ನಿಧಾನವಾಗಿ ಕುಸಿಯುವ ನಿರೀಕ್ಷೆಯೂ ಇದೆ.* ಈ ವರದಿಯಲ್ಲಿ ಮುಖ್ಯವಾಗಿ ಒಟ್ಟು ಫಲವಂತಿಕೆ ದರದ (fertility rate) ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ಭಾರತದ ಮಹಿಳೆಯರಲ್ಲಿ ಸರಾಸರಿ ಮಕ್ಕಳ ಜನನ ಪ್ರಮಾಣವು ಈಗ 1.9ಕ್ಕೆ ಇಳಿದಿದ್ದು, ತಲೆಮಾರಿನಿಂದ ತಲೆಮಾರಿಗೆ ಜನಸಂಖ್ಯೆಯ ಗಾತ್ರ ಕಾಪಾಡಲು ಅಗತ್ಯವಿರುವ 2.1 ರ ಮಟ್ಟಕ್ಕಿಂತ ಕೆಳಗಿನದು.* ಈ ಕಡಿಮೆಯು ಆತಂಕದ ವಿಷಯವಾಗಿದ್ದರೂ, ಯುಎನ್ಎಫ್ಪಿಎ ಇದನ್ನು ಜನಸಂಖ್ಯಾ ಪ್ರಮಾಣದ ಬಿಕ್ಕಟ್ಟಾಗಿ ನೋಡದೆ, ನೈಜ ಸಂತಾನೋತ್ಪತ್ತಿ ಗುರಿಗಳನ್ನು ಈಡೇರಿಸಿಕೊಳ್ಳುವ ಸಾಧ್ಯತೆಗಳ ಕೊರತೆಯಾಗಿ ಪರಿಗಣಿಸಿದೆ.* ಪ್ರಸ್ತುತ ಭಾರತದಲ್ಲಿ ಶೇ.68ರಷ್ಟು ಜನರು ದುಡಿಯುವ ವಯಸ್ಸಿನವರಾಗಿದ್ದು (15-64 ವರ್ಷ), ಶೇ.26ರಷ್ಟು ಜನರು 10-24 ವಯೋಮಿತಿಯೊಳಗಿರುವವರು.* ವಯೋವೃದ್ಧರ (65 ವರ್ಷ ಮೇಲ್ಪಟ್ಟವರು) ಪ್ರಮಾಣವು ಶೇ.5.7ರಷ್ಟಿದೆ. 2025ರ ಹೊತ್ತಿಗೆ ಭಾರತದ ಜೀವಿತಾವಧಿ ಪುರುಷರಿಗೆ 71 ವರ್ಷ ಮತ್ತು ಮಹಿಳೆಯರಿಗೆ 74 ವರ್ಷಗಳಿರಲಿದೆ ಎಂದು ಅಂದಾಜಿಸಲಾಗಿದೆ.* ಇತಿಹಾಸವನ್ನು ನೋಡಿದರೆ, 1960ರಲ್ಲಿ ಸರಾಸರಿ ಓರ್ವ ಮಹಿಳೆಗೆ ಆರು ಮಕ್ಕಳು ಇದ್ದರು ಹಾಗೂ ಜನರಲ್ಲಿ ತುಂಬಾ ಕಡಿಮೆ ಮಂದಿಗೆ ಮಾತ್ರ ಗರ್ಭನಿರೋಧಕಗಳು ಲಭ್ಯವಿದ್ದವು. ಶಿಕ್ಷಣ ಮಟ್ಟವೂ ಆಧಾರಭೂತ ಸ್ಥಿತಿಯಲ್ಲಿತ್ತು.* ಭಾರತೀಯ ಜನಸಂಖ್ಯೆಯ ಆಕಾರ ಹಾಗೂ ಗತಿಯು ಪರಿಣಾಮಕಾರಿಯಾಗಿ ಬದಲಾಗುತ್ತಿದೆ. ಫಲವಂತಿಕೆಯ ಕೊರತೆಯೆ ನೈಜ ಸಮಸ್ಯೆಯಾಗಿದೆ ಎಂಬುದನ್ನು ವರದಿ ಗಂಭೀರವಾಗಿ ಎತ್ತಿಹಿಡಿದಿದೆ.