* ಉತ್ತರಾಖಂಡದ ದೇವಪ್ರಯಾಗ ಮತ್ತು ಜಾನಸು ನಡುವಿನ ಭಾಗದಲ್ಲಿ ನಿರ್ಮಾಣವಾಗುತ್ತಿರುವ ದೇಶದ ಅತೀ ಉದ್ದದ ರೈಲ್ವೆ ಸುರಂಗವು ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.* ಈ ಸುರಂಗ ನಿರ್ಮಾಣದ ಮೊದಲ ಹಂತವಾಗಿ ಬುಧವಾರ ಸುರಂಗ ತೋಡುವ ಕೆಲಸ ಯಶಸ್ವಿಯಾಗಿ ಪೂರ್ಣಗೊಂಡಿದೆ.* 125 ಕಿ.ಮೀ ಉದ್ದದ ರಿಷಿಕೇಶ್-ಕರ್ಣಪ್ರಯಾಗ್ ರೈಲು ಮಾರ್ಗ ಯೋಜನೆಯಡಿಯಲ್ಲಿ 14.6 ಕಿ.ಮೀ ಉದ್ದದ ಈ ಸುರಂಗ ನಿರ್ಮಾಣಗೊಂಡಿದೆ.* ಹಿಮಾಲಯದ ಕಠಿಣ ಭೂಭಾಗ ಮತ್ತು ಭೌಗೋಳಿಕ ಸವಾಲುಗಳನ್ನು ಎದುರಿಸಿ ಈ ಸುರಂಗವನ್ನು ತೋಡುವ ಮೂಲಕ ರೈಲ್ವೇ ಇಲಾಖೆಯು ಮತ್ತೊಂದು ಮಹತ್ವದ ಸಾಧನೆ ದಾಖಲಿಸಿದೆ.* ‘ಶಕ್ತಿ’ ಎಂಬ ಆಧುನಿಕ ಟಿಬಿಎಂ (ಟನಲ್ ಬೋರಿಂಗ್ ಮಷಿನ್) ಅನ್ನು ದೇಶದಲ್ಲಿ ಮೊದಲ ಬಾರಿಗೆ ಪರ್ವತ ಪ್ರದೇಶದಲ್ಲಿ ರೈಲ್ವೆ ಸುರಂಗ ನಿರ್ಮಾಣಕ್ಕೆ ಬಳಸಲಾಗಿದೆ.