* ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ವಧ್ವಾನ್‌ ಬಂದರು ನಿರ್ಮಾಣ ಕಾಮಗಾರಿಗೆ ಆಗಸ್ಟ್ 30. 2024 ರಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ.* ಇದು ದೇಶದ ಅತ್ಯಂತ ಆಳದ ಬಂದರು ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಒಟ್ಟು 76,000 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. * 2029ರಲ್ಲಿ ಈ ಯೋಜನೆಯ ಮೊದಲ ಹಂತ ಮುಕ್ತಾಯಗೊಳ್ಳಲಿದ್ದರೆ 2039ರಲ್ಲಿ ನಿರ್ಮಾಣ ಪೂರ್ತಿಗೊಳ್ಳಲಿದೆ. ಸದ್ಯ ಮುಂಬಯಿಯದ್ದು ದೇಶದ ಅತೀ ಆಳದ ಬಂದರು ಆಗಿದೆ.* ಬಂದರು ಮಧ್ಯ ಏಷ್ಯಾ ಮತ್ತು ರಷ್ಯಾದೊಂದಿಗೆ ಭಾರತದ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC) ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮೂಲಕ ವ್ಯಾಪಾರವನ್ನು ಉತ್ತೇಜಿಸುತ್ತದೆ. * ಏನಿದು ಯೋಜನೆ?- 12 ಲಕ್ಷ: ಸೃಷ್ಟಿಯಾಗಲಿರುವ ನೇರ ಉದ್ಯೋಗ- 1 ಕೋಟಿ: ಸೃಷ್ಟಿಯಾಗಲಿರುವ ಪರೋಕ್ಷ ಉದ್ಯೋಗ- 29.8 ಕೋಟಿ ಮೆಟ್ರಿಕ್‌ ಟನ್‌: ಸರಕು ನಿರ್ವಹಣೆ ಸಾಮರ್ಥ್ಯ- 1448 ಹೆಕ್ಟೇರ್‌: ಬಳಕೆಯಾಗಲಿರುವ ಸಮುದ್ರ ಪ್ರದೇಶ- 20 ಮೀಟರ್‌: ಬಂದರು ಹೊಂದಿರುವ ಆಳ