* 2024ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಭಾರತದ ಒಟ್ಟು ದೇಶಿಯ ಆಂತರಿಕ ಉತ್ಪನ್ನ (ಜಿಡಿಪಿ) ಶೇ5.4ಕ್ಕೆ ಕುಸಿತ ಕಂಡಿದ್ದು, ಇದು 2 ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆ.* ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಈ ಕುರಿತು ಶುಕ್ರವಾರ (ನ.29) ವರದಿ ಬಿಡುಗಡೆ ಮಾಡಿದೆ. ತಯಾರಿಕಾ ಮತ್ತು ಗಣಿ ವಲಯಗಳ ಪ್ರಗತಿ ಗಣನೀಯವಾಗಿ ಕುಸಿದಿರುವುದು ಹಾಗೂ ಜನರು ಮಾಡುತ್ತಿರುವ ವೆಚ್ಚ ಕಡಿಮೆಯಾಗಿರುವುದು ಈ ಕುಸಿತಕ್ಕೆ ಕಾರಣ ಎಂದು ಎನ್ಎಸ್ಒ ಹೇಳಿದೆ.* ಸೆಪ್ಟೆಂಬರ್ ತೈಮಾಸಿಕದಲ್ಲಿ ದೇಶದ ಜಿಡಿಪಿ ಶೇ 7.2ರಷ್ಟು ಪ್ರಗತಿ ಕಾಣಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿತ್ತು. ಆದರೆ, ಅದು ಸಾಧ್ಯವಾಗಿಲ್ಲ.* 2023-24ರ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 8.1ರಷ್ಟಿತ್ತು. ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 6.7ರಷ್ಟಿತ್ತು. ಉತ್ಪಾದನಾ ವಲಯ ಮತ್ತು ಗಣಿಗಾರಿಕೆ ವಲಯದ ಮಂದಗತಿಯ ಬೆಳವಣಿಗೆ, ಕುಸಿದ ಬೇಡಿಕೆ ಜಿಡಿಪಿ ಕುಸಿತಕ್ಕೆ ಕಾರಣ.* ಕಳೆದ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ತಯಾರಿಕಾ ವಲಯದ ಜಿವಿಎ ಪ್ರಗತಿ ಶೇ.14.3ರಷ್ಟಿತ್ತು. ಅದು ಈ ವರ್ಷ ಶೇ.2.2ಕ್ಕೆ ಇಳಿಕೆಯಾಗಿದೆ.* ಜಿಡಿಪಿ ಕುಸಿತದ ನಡುವೆಯೂ ಭಾರತವು ಕ್ಷಿಪ್ರ ಪ್ರಗತಿ ಕಾಣುತ್ತಿರುವ ಅತಿದೊಡ್ಡ ಆರ್ಥಿಕತೆಯಾಗಿ ಮುಂದುವರಿದಿದೆ ಎಂದು ಸರಕಾರ ಹೇಳಿದೆ.