* ಇಂಡಿಯಾದ ಗಗನಯಾನ ಬಾಹ್ಯಾಕಾಶ ಮಿಷನ್ ಡಿಸೆಂಬರ್ 2025ರಲ್ಲಿ ನಿರ್ಜೀವ ಪರೀಕ್ಷಾ ಹಾರಾಟ ನಡೆಸಲಿದೆ. ಈ ಹಂತದಲ್ಲಿ ಎಐ ಆಧಾರಿತ ಅರ್ಧ ಮಾನವರೂಪದ ರೋಬೋಟ್ ವ್ಯೋಮಮಿತ್ರ ನಿಯೋಜನೆಯಾಗಲಿದೆ.* ಇದು ಭಾರತದ ಮೊದಲ ಮಾನವಸಹಿತ ಮಿಷನ್ಗಾಗಿ ಪರಿಸ್ಥಿತಿಗಳನ್ನು ಪರಿಶೀಲಿಸಲು ನೆರವಾಗುತ್ತದೆ.* ‘ವ್ಯೋಮ’ ಅಂದರೆ ಆಕಾಶ, ‘ಮಿತ್ರ’ ಅಂದರೆ ಸ್ನೇಹಿತ. ಇಸ್ರೋ ನಿರ್ಮಿಸಿರುವ ಈ ಅರ್ಧ ಮಾನವರೂಪದ ಮಹಿಳಾ ರೋಬೋಟ್ ಮಾನವ ಅಂತರಿಕ್ಷಯಾತ್ರಿಗಳ ಕಾರ್ಯಗಳನ್ನು ಅನುಕರಿಸಲು ವಿನ್ಯಾಸಗೊಂಡಿದೆ.ಪ್ರಮುಖ ವೈಶಿಷ್ಟ್ಯಗಳು:- ಎಐ ಆಧಾರಿತವಾಗಿ ಮಾತುಕತೆ, ಮೇಲ್ವಿಚಾರಣೆ, ನಿಯಂತ್ರಣ ಹಾಗೂ ಸಂವಹನ ನಡೆಸುವುದು.- ಅರ್ಧ ಮಾನವರೂಪದ ವಿನ್ಯಾಸ – ಮುಖ್ಯವಾಗಿ ಮೇಲ್ಭಾಗ.- ತಾಪಮಾನ, ಒತ್ತಡ, ತೇವಾಂಶ, CO₂ ಮಟ್ಟಗಳಂತಹ ಪರಿಸರ ಸೆನ್ಸರ್ ಸಾಮರ್ಥ್ಯ.- ಸ್ವಿಚ್ ಪ್ಯಾನೆಲ್ಗಳನ್ನು ಕಾರ್ಯಗತಗೊಳಿಸುವ ಮತ್ತು ಭೂ ನಿಯಂತ್ರಣ ಕೇಂದ್ರದೊಂದಿಗೆ ಸಂವಹನ ನಡೆಸುವ ಸಾಮರ್ಥ್ಯ.* ವ್ಯೋಮಮಿತ್ರ ಗಗನ್ಯಾನ್ ಮಿಷನ್ನ ತಯಾರಿಕಾ ಹಂತದ ಕೇಂದ್ರೀಯ ಭಾಗವಾಗಿದ್ದು, ಭಾರತವು ಬಾಹ್ಯಾಕಾಶ ತಂತ್ರಜ್ಞಾನ, ಎಐ ಏಕೀಕರಣ ಮತ್ತು ರೋಬೋಟಿಕ್ಸ್ನಲ್ಲಿ ಸಾಧಿಸಿರುವ ಸಾಮರ್ಥ್ಯವನ್ನು ತೋರಿಸುತ್ತದೆ.