* ವಿಶ್ವದಾದ್ಯಂತ ಪ್ರತಿವರ್ಷ ಡಿಸೆಂಬರ್ 9 ರಂದು ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಭ್ರಷ್ಟಾಚಾರ ಮತ್ತು ಆಡಳಿತ, ಅಭಿವೃದ್ಧಿ ಮತ್ತು ಸಮಾಜದ ಮೇಲೆ ಅದರ ಹಾನಿಕಾರಕ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಈ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. * ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ 2024 ರ ಥೀಮ್ "ಭ್ರಷ್ಟಾಚಾರದ ವಿರುದ್ಧ ಯುವಕರೊಂದಿಗೆ ಒಂದಾಗುವುದು: ನಾಳೆಯ ಸಮಗ್ರತೆಯನ್ನು ರೂಪಿಸುವುದು" (United against corruption: youth forging integrity for tomorrow) ಎಂಬುವುದಾಗಿದೆ. * ಭ್ರಷ್ಟಾಚಾರ-ವಿರೋಧಿ ಒಪ್ಪಂದಕ್ಕೆ 140 ದೇಶಗಳು ಸಹಿ ಹಾಕಿದವು ಮತ್ತು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಅಕ್ಟೋಬರ್ 2003 ರಲ್ಲಿ ಭ್ರಷ್ಟಾಚಾರದ ವಿರುದ್ಧ ವಿಶ್ವಸಂಸ್ಥೆಯ ಸಮಾವೇಶವನ್ನು ಅಂಗೀಕರಿಸಿದ ನಂತರಡಿಸೆಂಬರ್ 14, 2005 ರಂದು ಜಾರಿಗೆ ತರಲಾಯಿತು. ಅಂದಿನಿಂದ ಪ್ರತಿ ವರ್ಷ ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. * ವಿಶ್ವ ಭ್ರಷ್ಟಾಚಾರ ಪಟ್ಟಿ 2025 (ಸಿಪಿಐ 2024 ಅಂಕಗಳ ಆಧಾರದ ಮೇಲೆ) : ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (ಸಿಪಿಐ) 180 ದೇಶಗಳನ್ನು ಸಾರ್ವಜನಿಕ ವಲಯದ ಭ್ರಷ್ಟಾಚಾರದ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತದೆ. ಅಂಕಗಳು 100 (ಅತ್ಯಂತ ಸ್ವಚ್ಛ) ದಿಂದ 0 (ಅತ್ಯಂತ ಭ್ರಷ್ಟ) ವರೆಗೆ ಇರುತ್ತವೆ.* ಕನಿಷ್ಠ ಭ್ರಷ್ಟ ರಾಷ್ಟ್ರಗಳು 2025ಡೆನ್ಮಾರ್ಕ್ - 90ಫಿನ್ಲ್ಯಾಂಡ್ - 88ಸಿಂಗಾಪುರ - 84ನ್ಯೂಜಿಲೆಂಡ್ - 83ಲಕ್ಸೆಂಬರ್ಗ್ - 81ನಾರ್ವೆ — 81ಸ್ವಿಟ್ಜರ್ಲೆಂಡ್ - 81ಸ್ವೀಡನ್ - 80ನೆದರ್ಲ್ಯಾಂಡ್ಸ್ - 78ಆಸ್ಟ್ರೇಲಿಯಾ - 77ಐಸ್ಲ್ಯಾಂಡ್ - 77ಐರ್ಲೆಂಡ್ - 77* ಅತ್ಯಂತ ಭ್ರಷ್ಟ ರಾಷ್ಟ್ರಗಳು 2025ದಕ್ಷಿಣ ಸುಡಾನ್ — 8ಸೊಮಾಲಿಯಾ — 9ವೆನೆಜುವೆಲಾ — 10ಸಿರಿಯಾ - 12ಈಕ್ವಟೋರಿಯಲ್ ಗಿನಿ — 13ಎರಿಟ್ರಿಯಾ — 13ಲಿಬಿಯಾ — 13ಯೆಮೆನ್ — 13ನಿಕರಾಗುವಾ — 14ಉತ್ತರ ಕೊರಿಯಾ — 15ಸುಡಾನ್ - 15 * ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ : 2024 ರ CPI ನಲ್ಲಿ ಭಾರತವು 38/100 ಅಂಕಗಳನ್ನು ಗಳಿಸಿತು ಮತ್ತು 180 ದೇಶಗಳಲ್ಲಿ96 ನೇ ಸ್ಥಾನದಲ್ಲಿದೆ.* ಸಾರ್ವಜನಿಕ ವಲಯದ ಭ್ರಷ್ಟಾಚಾರದ ಗ್ರಹಿಕೆ ಸೂಚ್ಯಂಕವನ್ನು ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ವಾರ್ಷಿಕವಾಗಿ ಪ್ರಕಟಿಸುತ್ತದೆ. ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕವನ್ನು ಮೊದಲು 1995 ರಲ್ಲಿ ಬಿಡುಗಡೆಮಾಡಲಾಯಿತು.