* ಪ್ರತಿ ವರ್ಷ ಅಂತರಾಷ್ಟ್ರೀಯ ಸ್ವಯಂಸೇವಕರ ದಿನವನ್ನು ಪ್ರತಿ ವರ್ಷ ಡಿಸೆಂಬರ್ 05 ರಂದು ಆಚರಿಸಲಾಗುತ್ತದೆ. * 1985 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ವಾರ್ಷಿಕವಾಗಿ ಡಿಸೆಂಬರ್ 5 ರಂದು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ಸ್ವಯಂಸೇವಕರ ದಿನವನ್ನು ಆಚರಿಸಲು ಸರ್ಕಾರಗಳನ್ನು ಆಹ್ವಾನಿಸಿತು. ಈ ವೇಳೆ ಯಲ್ಲಿ ಸ್ವಯಂಸೇವಕ ಸೇವೆಯ ಬಗ್ಗೆ ಜಾಗೃತಿ ಮೂಡಿಸಲು ಅವರನ್ನು ಒತ್ತಾಯಿಸಿತು. ಸಾಮಾನ್ಯ ಸಭೆಯಲ್ಲಿ ನವೆಂಬರ್ 20, 1997 ರ ನಿರ್ಣಯ 52/17 ರಲ್ಲಿ ಸ್ವಯಂಸೇವಕರನ್ನು ಮತ್ತಷ್ಟು ಗುರುತಿಸಲು, ಅವರ ಕೆಲಸವನ್ನು ಸುಗಮಗೊಳಿಸಲು, ಸಂವಹನ ಜಾಲವನ್ನು ರಚಿಸಲು ಮತ್ತು ಸ್ವಯಂಸೇವಾ ಸೇವೆಯ ಪ್ರಯೋಜನಗಳನ್ನು ಉತ್ತೇಜಿಸಲು 2001 ಅನ್ನು ಸ್ವಯಂಸೇವಕರ ಅಂತಾರಾಷ್ಟ್ರೀಯ ವರ್ಷ ಎಂದು ಘೋಷಿಸಿತು. ಅಂದಿನಿಂದ ಅಂತಾರಾಷ್ಟ್ರೀಯ ಸ್ವಯಂ ಸೇವಕರ ದಿನದ ಆಚರಣೆಯೂ ಚಾಲ್ತಿಯಲ್ಲಿದೆ.* ಅಂತರರಾಷ್ಟ್ರೀಯ ಸ್ವಯಂಸೇವಕ ದಿನದ ಉದ್ದೇಶಗಳು : - ಸ್ವಯಂಸೇವಕ ಅನುಭವಗಳನ್ನು ಪ್ರದರ್ಶಿಸುವುದು- ಅಂತರ್ಜಾಲದ ಮೂಲಕ ಜಾಗತಿಕ ಸಜ್ಜುಗೊಳಿಸುವಿಕೆ- ಅತ್ಯುತ್ತಮ ಸ್ವಯಂಸೇವಕರ ಗುರುತಿಸುವಿಕೆ- ಜಾಗತಿಕ ಅಭಿವೃದ್ಧಿ ಗುರಿಗಳಿಗೆ ಕೊಡುಗೆ