* ಭಾರತೀಯ ನೌಕಾಪಡೆಯು ದೇಶಕ್ಕೆ ಸಲ್ಲಿಸುತ್ತಿರುವ ಸೇವೆಗಳು, ಸಾಧನೆಗಳು ಮತ್ತು ದೇಶದಲ್ಲಿ ಅದರ ಪಾತ್ರವನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ 4 ರಂದು ಭಾರತದಲ್ಲಿ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ.* 2025ರ ಭಾರತದಲ್ಲಿ ನೌಕಾಪಡೆಯ ದಿನದ ಥೀಮ್ "ಯುದ್ಧಕ್ಕೆ ಸಿದ್ಧ, ವಿಶ್ವಾಸಾರ್ಹ ಹಾಗೂ ಆತ್ಮನಿರ್ಭರ ಪಡೆ, ವಿಕಸಿತ ಭಾರತಕ್ಕಾಗಿ ಸಮುದ್ರಗಳ ರಕ್ಷಣೆ" ಎಂಬುವುದಾಗಿದೆ.* 1971ರಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಭಾರತೀಯ ನೌಕಾಪಡೆ ಆಪರೇಶನ್ ಟ್ರೈಡೆಂಟ್ ಮೂಲಕ ಪಾಕ್ ಸೇನೆಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಈ ಕಾರ್ಯಾಚರಣೆ ಪ್ರಾರಂಭ ಮಾಡಿದ ದಿನದ ಸ್ಮರಣೆಗಾಗಿ ಹಾಗೂ ವಿವಿಧ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಯೋಧರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 4ರಂದು ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.* 1674ರಲ್ಲಿ ಮರಾಠ ಸಾಮ್ರಾಜ್ಯ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜ ಮೊತ್ತಮೊದಲ ಬಾರಿಗೆ ನೌಕಾಪಡೆಯನ್ನು ಸ್ಥಾಪಿಸಿದ್ದರು. ಫಿರಂಗಿಗಳನ್ನು ಅಳವಡಿಸಿದ ನೌಕೆಗಳೊಂದಿಗೆ ಬ್ರಿಟಿಷರು ಮತ್ತು ಪೋರ್ಚುಗೀಸರಿಗೆ ಭಾರಿ ಸವಾಲೊಡ್ಡಿದ್ದರು. ಹೀಗಾಗಿ ಶಿವಾಜಿಯನ್ನು ಭಾರತೀಯ ನೌಕಾಪಡೆಯ ಪಿತಾಮಹ ಎಂದು ಕರೆಯಲಾಗುತ್ತದೆ.* ಇತ್ತೀಚಿನ ದತ್ತಾಂಶದ ಪ್ರಕಾರ, ಭಾರತೀಯ ನೌಕೆಯಲ್ಲಿ ಸುಮಾರು 70,000 ಸಿಬ್ಬಂದಿ ಸೇವೆಯಲ್ಲಿದ್ದು, 50 ಸಾವಿರ ಮೀಸಲು ಸಿಬ್ಬಂದಿ, 10,169 ಮಂದಿ ಅಧಿಕಾರಿಗಳು, 150 ಯುದ್ಧನೌಕೆಗಳು, 136 ಕರಾವಳಿ ಗಸ್ತು ಪಡೆ ನೌಕೆ, 18 ಜಲಾಂತರ್ಗಾಮಿ ನೌಕೆ ಹಾಗೂ 300 ಯುದ್ಧ ವಿಮಾನಗಳಿವೆ. ಫ್ರಿಗಟ್ (ಸಣ್ಣಸಮರ ನೌಕೆ), ಕ್ಷಿಪಣಿ ನಾಶಕ ನೌಕೆ, ಕಾರ್ವೆಟ್ (ಕಾವಲು ನೌಕೆ), ಸಾಂಪ್ರದಾಯಿಕ ಜಲಾಂತರ್ಗಾಮಿಗಳು, ಅಣ್ವಸ್ತ್ರಸಜ್ಜಿತ ಜಲಾಂತರ್ಗಾಮಿಗಳು, ಮೇನ್ ಕೌಂಟರ್ಮೆಷರ್ ವೆಸಲ್ಗಳು, ಮರುಪೂರಣ ನೌಕೆಗಳು, టగో ತೈಲ ಬೋಟ್ಗಳನ್ನು ಹೊಂದಿವೆ.* ಸ್ವದೇಶಿ ಯುದ್ಧ ನೌಕೆ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ಯುದ್ಧನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು 2022ರ ಸೆಪ್ಟೆಂಬರ್ 2ರಂದು ಉದ್ಘಾಟಿಸಿದ್ದರು. ಇದೀಗ ತಾರಾಗಿರಿ, ಐಎನ್ಎಸ್ ತಮಾಲ್, ನೀಲಗಿರಿ ಸೇರಿದಂತೆ ಹಲವು ಸ್ವದೇಶಿ ನಿರ್ಮಿತ ನೌಕೆಗಳು ನೌಕಾಪಡೆಗೆ ಸೇರ್ಪಡೆಗೊಂಡಿವೆ.