* ಪ್ರತಿ ವರ್ಷ ಡಿಸೆಂಬರ್ 3 ರಂದು ಅಂತಾರಾಷ್ಟ್ರೀಯ ವಿಕಲ ಚೇತನರ ದಿನವನ್ನು ವಿಕಲಾಂಗ ವ್ಯಕ್ತಿಗಳ ಸ್ಥಿತಿಸ್ಥಾಪಕತ್ವ, ಸಾಧನೆಗಳು ಮತ್ತು ಹಕ್ಕುಗಳನ್ನು ಗೌರವಿಸಲು ಆಚರಿಸಲಾಗುತ್ತದೆ. * ಅಂತಾರಾಷ್ಟ್ರೀಯ ವಿಕಲ ಚೇತನರ ದಿನದ 2025 ರ ಥೀಮ್ " ಸಾಮಾಜಿಕ ಪ್ರಗತಿಯನ್ನು ಮುನ್ನಡೆಸಲು ಅಂಗವಿಕಲರನ್ನು ಒಳಗೊಂಡ ಸಮಾಜಗಳನ್ನು ಬೆಳೆಸುವುದು"ಎಂಬುವುದಾಗಿದೆ.* ಅಂಗವಿಕಲ ವ್ಯಕ್ತಿಗಳ ಅಂತರಾಷ್ಟ್ರೀಯ ದಿನವನ್ನು 1992 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ನಿರ್ಣಯ 47/3 ಮೂಲಕ ಘೋಷಿಸಲಾಯಿತು. ಸಮಾಜ ಮತ್ತು ಅಭಿವೃದ್ಧಿಯ ಎಲ್ಲಾ ಕ್ಷೇತ್ರಗಳಲ್ಲಿ ವಿಕಲಾಂಗ ವ್ಯಕ್ತಿಗಳ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಮತ್ತು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದ ಪ್ರತಿಯೊಂದು ಅಂಶಗಳಲ್ಲಿ ಅವರ ಪರಿಸ್ಥಿತಿಯ ಅರಿವನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.* ಅಂತಾರಾಷ್ಟ್ರೀಯ ವಿಕಲ ಚೇತನರ ದಿನದ ಗುರಿಗಳು : - ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ವಿಕಲಾಂಗ ವ್ಯಕ್ತಿಗಳ ನಾಯಕತ್ವವನ್ನು ಉತ್ತೇಜಿಸುವುದು.- ಸಮಾಜದ ಎಲ್ಲಾ ಅಂಶಗಳಲ್ಲಿ ವಿಕಲಾಂಗ ವ್ಯಕ್ತಿಗಳ ಸೇರ್ಪಡೆಯನ್ನು ಖಚಿತಪಡಿಸುವುದು. - ನಿರ್ಣಯ ಮಾಡುವ ಪ್ರಕ್ರಿಯೆಗಳಲ್ಲಿ ವಿಕಲಾಂಗ ವ್ಯಕ್ತಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು. - ವಿಕಲಚೇತನರ ಹಕ್ಕುಗಳ ಅರಿವು ಮೂಡಿಸುವುದು.- ವಿಕಲಾಂಗ ವ್ಯಕ್ತಿಗಳ ಸಾಧನೆಗಳನ್ನು ಕೊಂಡಾಡುವುದು.* ಪ್ರಮುಖ ಅಂಶಗಳು : => ಜಗತ್ತಿನಲ್ಲಿರುವ ಒಟ್ಟು ವಿಶೇಷಚೇತನರು : 1.3 ಬಿಲಿಯನ್=> ಒಟ್ಟು ಜನ ಸಂಖ್ಯೆಯಲ್ಲಿ ವಿಶೇಷಚೇತನರ ಪ್ರಮಾಣ : 16%=> ಭಾರತದ ಜನಸಂಖ್ಯೆಯಲ್ಲಿ ವಿಶೇಷಚೇತನರ ಪ್ರಮಾಣ : 2.21%=> 2011ರ ಜನಗಣತಿ ಪ್ರಕಾರ ಭಾರತದಲ್ಲಿ ವಿಶೇಷಚೇತನರ ಸಂಖ್ಯೆ : 2.68 ಕೋಟಿ => ಜಗತ್ತಿನ ಆರು ಮಂದಿಯಲ್ಲಿ ಒಬ್ಬರು ವಿಶೇಷಚೇತನರು=> 2011ರ ಜನಗಣತಿ ಪ್ರಕಾರ ಭಾರತದಲ್ಲಿ ಪುರುಷ ವಿಶೇಷಚೇತನರ ಸಂಖ್ಯೆ : 1.49 ಕೋಟಿ => 2011ರ ಜನಗಣತಿ ಪ್ರಕಾರ ಭಾರತದಲ್ಲಿ ಮಹಿಳೆಯರು ವಿಶೇಷಚೇತನರ ಸಂಖ್ಯೆ : 1.19 ಕೋಟಿ => ಅತಿ ಹೆಚ್ಚು ವಿಶೇಷಚೇತನರನ್ನು ಹೊಂದಿರುವ ರಾಷ್ಟ್ರಗಳು :ಹೈತಿ, ಮಾಲ್ಮೀನ್ಸ್