* ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಪ್ರತಿ ವರ್ಷ ಡಿಸೆಂಬರ್ 2ರಂದು ಆಚರಿಸಲಾಗುತ್ತದೆ. ಈ ದಿನವು 1984ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ದುರಂತದ ಸಂತ್ರಸ್ತರ ಸ್ಮರಣಾರ್ಥ ಹಾಗೂ ಮಾಲಿನ್ಯದಿಂದ ಉಂಟಾಗುವ ಅಪಾಯಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಮುಡಿಪಾಗಿಡಲಾಗಿದೆ.* ಇತಿಹಾಸ ಹಿನ್ನೆಲೆ :1984ರ ಡಿಸೆಂಬರ್ 2-3ರ ಮಧ್ಯರಾತ್ರಿ, ಮಧ್ಯಪ್ರದೇಶದ ಭೋಪಾಲಿನಲ್ಲಿ ಇರುವ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ವಿಷಕಾರಿ ‘ಮೀಥೈಲ್ ಐಸೊಸೈನೇಟ್ (MIC)’ ಅನಿಲ ಸೋರಿಕೆಯಾಯಿತು. ಇದು ವಿಶ್ವದ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಕೈಗಾರಿಕಾ ದುರಂತಗಳಲ್ಲಿ ಒಂದಾಗಿದ್ದು, ಸಾವಿರಾರು ಜನರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಅನೇಕರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲಿದರು. ಈ ದುರಂತವು ಕೈಗಾರಿಕಾ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯ ಅಗತ್ಯವನ್ನು ವಿಶ್ವಕ್ಕೆ ಬೋಧಿಸಿತು.ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಪ್ರಮುಖ ಉದ್ದೇಶಗಳು: - ಮಾಲಿನ್ಯದ ವಿವಿಧ ರೂಪಗಳು (ವಾಯು, ನೀರು, ಮಣ್ಣು) ಮಾನವ ಮತ್ತು ಪರಿಸರದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು.-ಕೈಗಾರಿಕಾ ಘಟಕಗಳು ಹಾಗೂ ಸಾಮಾನ್ಯ ಜನರು ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು.- ದುರಂತಗಳಿಂದ ಪಾಠ ಕಲಿದು ಸುರಕ್ಷತಾ ಕ್ರಮಗಳನ್ನು ಬಲಪಡಿಸುವ ಅಗತ್ಯವನ್ನು ನೆನಪಿಸುವುದು.ಮಾಲಿನ್ಯದ ಪರಿಣಾಮಗಳು :ಮಾಲಿನ್ಯವು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ:1. ವಾಯು ಮಾಲಿನ್ಯ – ದಮ್ಮು, ಬ್ರಾಂಕೈಟಿಸ್, ಉಸಿರಾಟದ ಸಮಸ್ಯೆಗಳು.2. ಜಲ ಮಾಲಿನ್ಯ – ಆರೋಧ್ಯಕರ ನೀರಿನ ಕೊರತೆ, ಜಲಜನ್ಯ ರೋಗಗಳು.3. ಮಣ್ಣು ಮಾಲಿನ್ಯ – ಕೃಷಿ ಉತ್ಪಾದನೆ ಕುಂಠಿತವಾಗುವುದು, ರಾಸಾಯನಿಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಗುಣಮಟ್ಟ ಕುಸಿತ.ಇದೇ ರೀತಿಯಲ್ಲಿ, ಮಾಲಿನ್ಯವು ಹವಾಮಾನ ಪರಿವರ್ತನೆ, ಪರಿಸರ ಹಾನಿ, ಜೈವ ವೈವಿಧ್ಯ ನಾಶ ಇತ್ಯಾದಿ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ.