* ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 2 ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ. ಭೋಪಾಲ್ ಅನಿಲ ದುರಂತದಲ್ಲಿ ಕಳೆದುಹೋದ ಅಮೂಲ್ಯ ಜೀವಗಳನ್ನು ಸ್ಮರಿಸಲು ಈ ದಿನವನ್ನು ಗುರುತಿಸಲಾಗಿದೆ.* 2, 1984 ರಂದು ಭೋಪಾಲ್ ನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ನ (UCIL) ಕೀಟನಾಶಕ ಸ್ಥಾವರದಿಂದ ʼಮೀಥೈಲ್ ಐಸೊಸೈನೇಟ್ʼ ಅನಿಲ ಸೋರಿಕೆಯಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದರು. ಅಂದಿನಿಂದ ಡಿಸೆಂಬರ್ 2 ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ.* ಜಲ, ವಾಯು, ಶಬ್ದಮಾಲಿನ್ಯದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ರಾಷ್ಟ್ರೀಯ ಮಾಲಿನ್ಯ ದಿನವನ್ನು ಆಚರಿಸಲಾಗುತ್ತದೆ.* ಜಗತ್ತು ದಿನದಿಂದ ಬೆಳೆಯುತ್ತಿರುವುದರಿಂದಾಗಿ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಇದು ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣವಾಗಿದೆ. ಇನ್ನು ಕೀಟ ನಿಯಂತ್ರಕ ಔಷಧಗಳು, ಬೆಳೆ ತ್ಯಾಜ್ಯಗಳನ್ನು ಸುಡುವುದು, ರಾಸಾಯನಿಕ ಗೊಬ್ಬರಗಳ ಬಳಕೆ ಮಿತಿಮೀರುತ್ತಿರುವುದು, ಕೈಗಾರಿಕೆಗಳು ಹೊರಸೂಸುತ್ತಿರುವ ಅಪಯಾಕಾರಿ ರಾಸಾಯನಿಕಗಳು, ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆ ಮಾಲಿನ್ಯಕ್ಕೆ ಮುಖ್ಯ ಕಾರಣಗಳಾಗಿವೆ. * ಸರ್ಕಾರಗಳು ವಾಯು ಮಾಲಿನ್ಯ ತಡೆಯಲು ಎಷ್ಟೇ ಕ್ರಮಗಳನ್ನು ಕೈಗೊಂಡರು ವಾಯು ಮಾಲಿನ್ಯ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.* ದಿ ಸ್ಟೇಟ್ ಆ್ಯಂಡ್ ಅಟ್ ದಿ ಹಾರ್ಟ್ ಆಫ್ ದಿ ಪ್ಯೂಚರ್ ಆಫ್ - ವರ್ಕ್ ಬಿಲ್ಡಿಂಗ್ ಆನ್ 100 ಇಯರ್ಸ್ ಆಫ್ ಎಕ್ಸ್ಪೀರಿಯನ್ಸ್' ಶೀರ್ಷಿಕೆಯ ಈ ವರದಿಯಲ್ಲಿ 1919ರ ನಂತರದ ವಿಶ್ವದ ಅತ್ಯಂತ ಭೀಕರ ಕೈಗಾರಿಕಾ ದುರ್ಘಟನೆಗಳಲ್ಲಿ ಭೋಪಾಲ್ ಅನಿಲ ದುರಂತ ಕೂಡ ಒಂದು ಎಂದು ತಿಳಿಸಿದೆ. * 20ನೇ ಶತಮಾನದ ವಿಶ್ವದ ಭೀಕರ ಕೈಗಾರಿಕಾ ಸ ಅಪಘಾತಗಳಲ್ಲಿ 1986ರ ಉಕ್ರೇನ್ನ ಚರ್ನೋಬಿಲ್ ದುರಂತ, ಜಪಾನ್ನ 2011ರ ಫಕುಶಿಮಾ ಪರಮಾಣು ದುರ್ಘಟನೆ ಹಾಗೂ ಢಾಕಾದ 2013ರ ರಾಣಾ ಪ್ಲಾಜಾ ಕಟ್ಟಡ ಅವಘಡಗಳು ಸೇರಿವೆ.* ಭಾರತದಲ್ಲಿ 2019ರಲ್ಲಿ ವಾಯುಮಾಲಿನ್ಯದಿಂದ 1.67 ಮಿಲಿಯನ್ ಸಾವು ಸಂಭವಿಸಿದೆ. ದೇಶದ ಒಟ್ಟು ಸಾವುಗಳಲ್ಲಿ ಶೇ. 17.8ರಷ್ಟು ವಾಯುಮಾಲ್ಯದ ಕಾರಣದ್ದಾಗಿವೆ. ವಾಯು ಗುಣಮಟ್ಟ ಕುಸಿತದ ಪರಿಣಾಮ ದಿಲ್ಲಿ, ಪಂಜಾಬ್, ಹರಿಯಾಣ, ಉತ್ತರಪ್ರದೇಶ ರಾಜ್ಯಗಳಲ್ಲಿ ಪ್ರತಿ ವರ್ಷ ಚಳಿಗಾಲದಲ್ಲಿ ವಾಯು ಮಾಲಿನ್ಯ ಜನರನ್ನು ತೀವ್ರವಾಗಿ ಬಾಧಿಸುತ್ತಿವೆ.* ಮಾಲಿನ್ಯ ನಿಯಂತ್ರಣ ಮತ್ತು ತಡೆಗೆ ಭಾರತ ಸರಕಾರ ವನ್ಯಜೀವಿ ಸಂರಕ್ಷಣಾ ಕಾಯಿದೆ, 1985ರಲ್ಲಿ ಗಂಗಾ ನದಿ ಶುದ್ದೀಕರಣಕ್ಕಾಗಿ ಕೇಂದ್ರೀಯ ಪ್ರಾಧಿಕಾರ, ನಮಾಮಿ ಗಂಗೆ ಯೋಜನೆ, 1952ರ ಅರಣ್ಯ ನೀತಿ, ಮಾಲಿನ್ಯ ನಿಯಂತ್ರಣ ಕಾಯಿದೆಯಂಥ ಹಲವು ಕ್ರಮಗಳು, ಉಪಕ್ರಮಗಳನ್ನು ಜಾರಿಗೆ ತಂದಿವೆ.