Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಡಿಸೆಂಬರ್ 18 : ಅಂತಾರಾಷ್ಟ್ರೀಯ ವಲಸಿಗರ ದಿನ
18 ಡಿಸೆಂಬರ್ 2025
*
ಅಂತಾರಾಷ್ಟ್ರೀಯ ವಲಸಿಗರ ದಿನ
ವನ್ನು ಪ್ರತಿ ವರ್ಷ
ಡಿಸೆಂಬರ್ 18
ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವು ಜಾಗತಿಕವಾಗಿ ವಲಸಿಗರು ಸಮಾಜ, ಆರ್ಥಿಕತೆ ಮತ್ತು ಸಂಸ್ಕೃತಿಗೆ ನೀಡಿರುವ ಅಮೂಲ್ಯ ಕೊಡುಗೆಗಳನ್ನು ಗುರುತಿಸುವುದರ ಜೊತೆಗೆ, ಅವರು ಎದುರಿಸುತ್ತಿರುವ ಸವಾಲುಗಳು, ಶೋಷಣೆ, ಭೇದಭಾವ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಜಾಗೃತಿ ಮೂಡಿಸಲು ಮೀಸಲಾಗಿದೆ.
*
ಅಂತಾರಾಷ್ಟ್ರೀಯ ವಲಸಿಗರ
ದಿನದ 2025ರ ಥೀಮ್ "ಸುರಕ್ಷಿತ ವಲಸೆಗೆ ಉತ್ತೇಜನ"
* ವಿಶ್ವಸಂಸ್ಥೆಯು
ಡಿಸೆಂಬರ್ 18, 1990
ರಂದು “ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರ ಹಕ್ಕುಗಳ ರಕ್ಷಣೆ ಕುರಿತು ಅಂತಾರಾಷ್ಟ್ರೀಯ ಸಮಾವೇಶ”ವನ್ನು ಅಂಗೀಕರಿಸಿತು. ಈ ಮಹತ್ವದ ಹೆಜ್ಜೆಯ ಸ್ಮರಣಾರ್ಥವಾಗಿ,
2000ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ
ಡಿಸೆಂಬರ್ 18ನ್ನು ಅಂತಾರಾಷ್ಟ್ರೀಯ ವಲಸಿಗರ ದಿನವಾಗಿ ಆಚರಿಸುವುದಾಗಿ ಘೋಷಿಸಿತು.
*ಈ ದಿನದ ಮುಖ್ಯ ಉದ್ದೇಶ ವಲಸಿಗರು ಆರ್ಥಿಕ ಅಭಿವೃದ್ಧಿ, ಕಾರ್ಮಿಕ ಮಾರುಕಟ್ಟೆ, ಆವಿಷ್ಕಾರಗಳು ಮತ್ತು ಸಮಾಜದ ಬೆಳವಣಿಗೆಯಲ್ಲಿ ವಹಿಸುವ ಪಾತ್ರವನ್ನು ಗುರುತಿಸುವುದಾಗಿದೆ. ಜೊತೆಗೆ, ವಲಸಿಗರ ಮಾನವ ಹಕ್ಕುಗಳನ್ನು ರಕ್ಷಿಸುವುದು, ಅವರ ಸ್ಥೈರ್ಯ ಮತ್ತು ಸಹನಶೀಲತೆಯನ್ನು ಗೌರವಿಸುವುದು ಹಾಗೂ ನ್ಯಾಯಯುತ ಮತ್ತು ಮಾನವೀಯ ವಲಸೆ ನೀತಿಗಳ ಅಗತ್ಯವನ್ನು ಒತ್ತಿಹೇಳುವುದು ಇದಾದ ಉದ್ದೇಶ.
* ಪ್ರಮುಖ ಅಂಶಗಳು:--
=>
ಸವಾಲುಗಳು:
ವಲಸಿಗರು ಶೋಷಣೆ, ಅಕ್ರಮ ವಲಸೆ, ಕಡಿಮೆ ಕೂಲಿ, ಅಪಾಯಕಾರಿ ಕೆಲಸದ ಪರಿಸ್ಥಿತಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ.
=>
ಕೊಡುಗೆಗಳು:
ವಲಸಿಗರು ಕೌಶಲ್ಯದ ಕೊರತೆಯನ್ನು ತುಂಬುವುದು, ಆರ್ಥಿಕ ಬೆಳವಣಿಗೆಗೆ ಬಲ ನೀಡುವುದು, ಹೊಸ ಆಲೋಚನೆಗಳು ಮತ್ತು ಆವಿಷ್ಕಾರಗಳನ್ನು ಉತ್ತೇಜಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ನೆರವಾಗುತ್ತಾರೆ
=>
ವಾರ್ಷಿಕ ಥೀಮ್:
ಪ್ರತಿ ವರ್ಷ ವಿಭಿನ್ನ ಥೀಮ್ನೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಇದು ವಲಸಿಗರ ಹಕ್ಕುಗಳು, ಗೌರವಯುತ ಜೀವನ ಮತ್ತು ಸಮಾನ ಅವಕಾಶಗಳ ಅಗತ್ಯವನ್ನು ಒತ್ತಿಹೇಳುತ್ತದೆ.
* ವಿಶ್ವದಲ್ಲಿ ವಲಸಿಗರ ಸಂಖ್ಯೆ:-
- ವಿಶ್ವಸಂಸ್ಥೆಯ 2024ರ ವರದಿ ಪ್ರಕಾರ ಜಾಗತಿಕ ವಲಸಿಗರ ಸಂಖ್ಯೆ 30.4 ಕೋಟಿ.
- ಜಾಗತಿಕ ಮಟ್ಟದಲ್ಲಿ ಮಹಿಳಾ ವಲಸಿಗರ ಪ್ರಮಾಣ ಶೇ 48.
- 2010ರಿಂದ ಮಹಿಳಾ ವಲಸಿಗರ ಸಂಖ್ಯೆಯಲ್ಲಿ ಶೇ 35.5 ರಷ್ಟು ಹೆಚ್ಚಳ ಕಂಡುಬಂದಿದೆ.
- ಯೂರೋಪ್ ರಾಷ್ಟ್ರಗಳಲ್ಲಿ ಮಹಿಳಾ ವಲಸಿಗರ ಪ್ರಮಾಣ ಶೇ 52 ಆಗಿದೆ.
- ಭಾರತದಲ್ಲಿ ಆಂತರಿಕ ವಲಸಿಗರ ಸಂಖ್ಯೆ ಸುಮಾರು 3.5 ಕೋಟಿ
* ಅಂತಾರಾಷ್ಟ್ರೀಯ ವಲಸಿಗರ ದಿನವು
ಸುರಕ್ಷಿತ, ಕ್ರಮಬದ್ಧ ಮತ್ತು ನಿಯಮಿತ ವಲಸೆ
ಯ ಮಹತ್ವವನ್ನು ಎತ್ತಿಹಿಡಿಯುತ್ತಾ, ಎಲ್ಲ ವಲಸಿಗರಿಗೆ ಸಮಾನ ಹಕ್ಕುಗಳು, ಗೌರವ ಮತ್ತು ಭದ್ರತೆಯನ್ನು ಒದಗಿಸುವ ಜಗತ್ತನ್ನು ನಿರ್ಮಿಸಲು ಕರೆ ನೀಡುವ ಮಹತ್ವದ ದಿನವಾಗಿದೆ.
Take Quiz
Loading...