* ಜಗತ್ತಿನಾದ್ಯಂತ ಇರುವ ವಲಸಿಗರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಕುರಿತು ಗಮನ ಸೆಳೆಯುವುದು ಮತ್ತು ವಲಸಿಗರ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಪ್ರತಿ ವರ್ಷಡಿಸೆಂಬರ್ 18 ರಂದು ಅಂತಾರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸಲಾಗುತ್ತದೆ.* ವಿಶ್ವಸಂಸ್ಥೆ ದಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ (ಯುಎನ್ ಜಿಎ) ಡಿಸೆಂಬರ್ 18 ರಂದು ಅಂತಾರಾಷ್ಟ್ರೀಯ ವಲಸಿಗರ ದಿನವನ್ನು ಆಚರಿಸಲು ಡಿಸೆಂಬರ್ 4, 2000 ರಂದು ನಿರ್ಧರಿಸಿತ್ತು.* ಪ್ರಪಂಚದಾದ್ಯಂತ ಅಗಾಧವಾದ ಮತ್ತು ಹೆಚ್ಚುತ್ತಿರುವ ವಲಸಿಗರನ್ನು ಪರಿಗಣಿಸಿದ ನಂತರ ಈ ವಿಶೇಷ ದಿನವು ಅಸ್ತಿತ್ವಕ್ಕೆ ಬಂದಿದೆ. * 1990 ಡಿಸೆಂಬರ್ 4 ರಂದು ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳ ಸದಸ್ಯರ ಹಕ್ಕುಗಳ ರಕ್ಷಣೆಗಾಗಿ ಅಂತರರಾಷ್ಟ್ರೀಯ ಸಮಾವೇಶವನ್ನು ನಡೆಸಿತ್ತು. ಬಳಿಕ ಡಿಸೆಂಬರ್ 18 2000 ರಿಂದ ಪ್ರತಿ ವರ್ಷ ಈ ಅಂತರಾಷ್ಟ್ರಿಯ ವಲಸಿಗರ ದಿನವನ್ನು ಆಚರಿಸುತ್ತ ಬರಲಾಗಿದೆ. * ಜಗತ್ತಿನ ವಿವಿಧ ದೇಶಗಳಿಂದ ಹೋದ ಸುಮಾರು 6.4 ಮಿಲಿಯನ್ ಅಂದ್ರೆ 64 ಲಕ್ಷ ಅಕ್ರಮ ವಲಸಿಗರು ಅಮೆರಿಕದಲ್ಲಿದ್ದಾರೆ. ಈ ಪೈಕಿ 7,25,000 ಭಾರತೀಯರಾಗಿದ್ದಾರೆ ಎಂದು ಹೊಸ ಅಧ್ಯಯನ ತಿಳಿಸಿದೆ. ಈ ಮೂಲಕ ಅಮೆರಿಕದಲ್ಲಿ ಅಕ್ರಮವಾಗಿ ವಾಸ ಇರುವವರ ಪೈಕಿ ಭಾರತೀಯರು 3ನೇ ಸ್ಥಾನದಲ್ಲಿದ್ದಾರೆ. * ವಲಸೆಗೆ ಕಾರಣಗಳು : ಯುದ್ಧ, ಪ್ರಾಕೃತಿಕ ವಿಕೋಪಗಳು, ಬಡತನ, ಆರ್ಥಿಕ ತೊಂದರೆಗಳು, ಕ್ರೌರ್ಯ ಮತ್ತಿತರ ಹಲವಾರು ಕಷ್ಟ ಕಾರಣಗಳಿಂದ ಜನರು ವಲಸೆ ಹೋಗುತ್ತಾರೆ. * ನಿರಾಶ್ರಿತರು, ವಲಸೆ ಕಾರ್ಮಿಕರು ಹಾಗೂ ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ವಲಸೆಯ ಕುರಿತು ಸೇವೆಗಳು ಮತ್ತು ಸಲಹೆಗಳನ್ನು ಒದಗಿಸುವ ಏಜನ್ಸಿ ಯ ಹೆಸರು - International Organisation for Migration ( IOM ),ಈ ಏಜೆನ್ಸಿಯು 2016ರಲ್ಲಿ ವಿಶ್ವ ಸಂಸ್ಥೆಯ ಏಜೆನ್ಸಿ ಆಯಿತು.* ಇದರ ಪ್ರಧಾನ ಕಚೇರಿ ಸ್ವಿಜರ್ಲ್ಯಾಂಡ್ ನ, ಗೆನೇವಾ ಎಂಬ ನಗರದಲ್ಲಿದೆ.- 2007ರಲ್ಲಿ ನಡೆಸಿದ ಸಮೀಕ್ಷಯ ಪ್ರಕಾರ 1.2 ಅಕ್ರಮ ವಲಸಿಗರಿದ್ದರು. - 2014ರಲ್ಲಿ ನಡೆಸಿದ ಸಮೀಕ್ಷಯ ಪ್ರಕಾರ 1.11 ಅಕ್ರಮ ವಲಸಿಗರಿದ್ದರು.