* ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ನ (ಪಿ ಕೆ ಎಲ್) 10 ನೇ ಆವೃತ್ತಿಯು ಅಹಮದಾಬಾದ್ ನ ಸಬರಮತಿ ನದಿಯಲ್ಲಿ ಅಕ್ಷರ್ ರಿವರ್ ಕ್ರೂಸ್ ನಲ್ಲಿ ಡಿಸೆಂಬರ್ 01 ರಂದು ಟೂರ್ನಿ ಗೆ ಚಾಲನೆ ನೀಡಲಾಗಿದ್ದು, ಪ್ರೊ ಕಬಡ್ಡಿ 10 ನೇ ಆವೃತ್ತಿಯ ಪಂದ್ಯಗಳು ಡಿಸೆಂಬರ್ 02 ರಂದು ನಡೆಯಲಿವೆ.* ಭಾರತದಲ್ಲಿ, 2014 ರಲ್ಲಿ ಪ್ರಾರಂಭವಾದ ಪ್ರೋ ಕಬಡ್ಡಿ ಲೀಗ್, ಭಾರತದಲ್ಲಿ ಐಪಿ ಎಲ್ ಬಳಿಕ ಎರಡನೇ ಕ್ರೀಡಾ ಲೀಗ್ ಆಗಿದೆ. ಈ ಬಾರಿಯೂ 12 ತಂಡಗಳು ಚಾಂಪಿಯನ್ ಕಿರೀಟಕ್ಕಾಗಿ ಪೈಪೋಟಿ ನಡೆಸಲಿವೆ.* ಈ ಬಾರಿ ಎಲ್ಲ ಫ್ರಾಂಚೈಸ್‌ಗಳ ತವರು ನೆಲದಲ್ಲಿ ಪಂದ್ಯಗಳು ಆಯೋಜನೆಯಾಗಿವೆ. ಮೊದಲ ಲೆಗ್‌ ಪಂದ್ಯಗಳು ಅಹಮದಾಬಾದ್‌ನಲ್ಲಿ ಡಿ.2 ರಿಂದ 7ರವರೆಗೆ. ಎರಡನೇ ಲೆಗ್‌ನ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಡಿ.8 ರಿಂದ 13ರ ವರೆಗೆ ಆಯೋಜನೆಯಾಗಿವೆ. ನಂತರ ಕ್ರಮವಾಗಿ ಪುಣೆ (ಡಿ.15-20). ಚೆನ್ನೈ (ಡಿಸೆಂಬರ್ 22-27). ನೋಯ್ಡಾ (ಡಿ.29- ಜನೆವರಿ.3. 2024), ಮುಂಬೈ (ಜನೆವರಿ.5-10). ಜೈಪುರ (ಜ.12-17), ಹೈದರಾಬಾದ್ (ಜನೆವರಿ19-24). ಪಾಟ್ನಾದಲ್ಲಿ (ಜನೆವರಿ.26-31), ದೆಹಲಿ (ಫೆಬ್ರುವರಿ 2-7) ಕೋಲ್ಕತ್ತಾ (ಫೆಬ್ರುವರಿ.9- 14)ಪಂಚಕುಲದಲ್ಲಿ (ಫೆ.16-21) ಲೀಗ್ ಹಂತದ ಪಂದ್ಯಗಳು ನಡೆಯಲಿವೆ.* 10 ನೇ ಆವೃತ್ತಿಯಲ್ಲಿ ಭಾಗವಹಿಸುವ 12 ತಂಡಗಳು ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ದಬಾಂಗ್ ಡೆಲ್ಲಿ, ಗುಜರಾತ್ ಜೈಂಟ್ಸ್, ಹರಿಯಾಣ ಸ್ಟೀಲರ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಪುಣೇರಿ ಪಲ್ಟನ್, ತಮಿಳು ತಲೈವಾಸ್, ತೆಲುಗು ಟೈಟಾನ್ಸ್, ಯು ಮುಂಬಾ, ಯುಪಿ ಯೋಧಾ.* ಪ್ರೊ ಕಬಡ್ಡಿ ಲೀಗ್ ವಿಜೇತ ತಂಡಗಳು1. ಜೈಪುರ್ ಪಿಂಕ್‌ ಪ್ಯಾಂಥರ್ಸ್2. ಯು ಮುಂಬಾ3. ಪಾಟ್ನಾ ಪೈರೆಟ್ಸ್4. ಪಾಟ್ನಾ ಪೈರೆಟ್ಸ್5. ಪಾಟ್ನಾ ಪೈರೆಟ್ಸ್6. ಬೆಂಗಳೂರು ಬುಲ್ಸ್7. ಬಂಗಾಳ ವಾರಿಯರ್ಸ್ 8. ದಬಾಂಗ್‌ಡೆಲ್ಲಿ9. ಜೈಪು‌ರ್ ಪಿಂಕ್‌ ಪ್ಯಾಂಥರ್ಸ್