* ಡಿಜಿಟಲ್ ವಂಚನೆಗಳನ್ನು ತಡೆಯುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) “ಡಿಜಿಟಲ್ ಪಾವತಿ ಗುಪ್ತಚರ ವೇದಿಕೆ” (DPIP) ರೂಪಿಸಲು ಮುಂದಾಗಿದೆ. ಇದನ್ನು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.* ಈ ಹೊಸ ವ್ಯವಸ್ಥೆಯ ರೂಪುರೇಷೆ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್ಗಳ ಸಹಕಾರದಿಂದ ನಿರ್ಧರಿಸಲಾಗುತ್ತಿದೆ. ವಂಚನೆ ಪ್ರಕರಣಗಳಿಂದ ಬಳಲುತ್ತಿರುವ ಈ ಬ್ಯಾಂಕ್ಗಳೊಂದಿಗೆ ಆರ್ಬಿಐ ಸಮಾಲೋಚನೆ ನಡೆಸುತ್ತಿದೆ.* ವ್ಯವಸ್ಥೆಯ ಮೂಲಕ ವಂಚನೆಯ ಶಂಕಿತ ವಹಿವಾಟುಗಳ ಮಾಹಿತಿ ತಕ್ಷಣವೇ ಹಂಚಿಕೊಳ್ಳಲಾಗುತ್ತದೆ. ಇದರಿಂದ ವಿಳಂಬವಾಗದ ಸ್ಪಂದನೆ ಸಾಧ್ಯವಾಗುತ್ತದೆ.* ವ್ಯವಸ್ಥೆ ಕಾರ್ಯಾರಂಭದ ನಂತರ, ವಂಚನೆಯ ಉದ್ದೇಶದ ವಹಿವಾಟುಗಳನ್ನು ಗುರುತಿಸಿ ತಡೆಯಲು ವಿವಿಧ ಮೂಲಗಳಿಂದ ಬಂದ ದತ್ತಾಂಶವನ್ನು ವಿಶ್ಲೇಷಿಸಲಾಗುತ್ತದೆ.* ಇತ್ತೀಚೆಗೆ ಕಾರ್ಡ್ ಹಾಗೂ ಇಂಟರ್ನೆಟ್ ಮೂಲಕ ನಡೆಯುವ ಪಾವತಿಗಳಲ್ಲಿ ಹೆಚ್ಚಿನ ವಂಚನೆ ಪ್ರಕರಣಗಳು ವರದಿಯಾಗಿವೆ ಎಂಬುದು ಈ ಕ್ರಮದ ಪ್ರಮುಖ ಹಿನ್ನಲೆ.* ಈ ತಿಂಗಳ ಆರಂಭದಲ್ಲೇ ಉನ್ನತ ಮಟ್ಟದ ಸಭೆ ನಡೆಸಿ ವ್ಯವಸ್ಥೆಯ ಆವಶ್ಯಕತೆ, ರಚನೆ, ಮತ್ತು ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗಿದೆ. ಮುಂದಿನ ತಿಂಗಳುಗಳಲ್ಲಿ ಈ ವ್ಯವಸ್ಥೆ ಕಾರ್ಯಚರಣೆಗೆ ಬರಲಿದೆ.