* ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು IT ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಸಂವಾದ ನಡೆಸಲಿದ್ದಾರೆ. * ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್ ಎಲ್ಲಾ "ಡಿಜಿಟಲ್ ನಾಗರಿಕ್" ಗಳಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಆನ್ಲೈನ್ ಪರಿಸರವನ್ನು ಖಾತ್ರಿಪಡಿಸುವ ಚೌಕಟ್ಟನ್ನು ನಿರ್ಮಿಸುವ ಭಾರತದ ಪ್ರಯಾಣದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ.* ಭಾರತೀಯ ನಾಗರಿಕರ ಜೀವನವನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸಿ ಹಾಗೂ ದೊಡ್ಡ ದತ್ತಾಂಶ ಕಳ್ಳತನದ ಶೋಷಣೆಯಿಂದ ವಿಶೇಷವಾಗಿ ಯುವಜನರ ಡಿಜಿಟಲ್ ವ್ಯವಹಾರಗಳನ್ನು ರಕ್ಷಿಸುವ ವಿಷಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಹಾಗೂ ಉಪಕ್ರಮಗಳ ಮಾಹಿತಿ ನೀಡಲಿದ್ದಾರೆ.