Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
"ಡಿಜಿಟಲ್ ಕ್ರಾಂತಿ: ಗ್ರಾಮೀಣ ಸಂಪರ್ಕಕ್ಕಾಗಿ ಮಹಾರಾಷ್ಟ್ರ ಸರ್ಕಾರ ಮತ್ತು ಸ್ಟಾರ್ಲಿಂಕ್ನ ಮಹತ್ವದ ಒಪ್ಪಂದ"
6 ನವೆಂಬರ್ 2025
* ಮಹಾರಾಷ್ಟ್ರ ಸರ್ಕಾರವು
ಎಲಾನ್ ಮಸ್ಕ್ (Elon Musk)
ಅವರ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸುವ ಸಂಸ್ಥೆಯಾದ
ಸ್ಟಾರ್ಲಿಂಕ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್ (Starlink Communications Private Limited)
ಕಂಪನಿಯೊಂದಿಗೆ ಮಹತ್ವದ ಒಪ್ಪಂದಕ್ಕೆ (MOU) ಸಹಿ ಹಾಕಿದೆ.
* ಸ್ಟಾರ್ಲಿಂಕ್ನ
ಉಪಗ್ರಹ ಇಂಟರ್ನೆಟ್ (Satellite Internet)
ಸೇವೆಗಳನ್ನು ಬಳಸಿಕೊಂಡು ಮಹಾರಾಷ್ಟ್ರದ
ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿರುವ ದೂರದ ಪ್ರದೇಶಗಳಿಗೆ
ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವುದು. ಈ ಒಪ್ಪಂದದ ಮೂಲಕ ಸರ್ಕಾರವು ಶಿಕ್ಷಣ, ಆರೋಗ್ಯ, ಭದ್ರತೆ ಹಾಗು ಆಡಳಿತ ಸೇವೆಗಳ ಡಿಜಿಟಲೀಕರಣಕ್ಕೆ ಮತ್ತೊಂದು ಸಾಧನೆ ಮಾಡಲಿದೆ.
* ಈ ಒಪ್ಪಂದದ ಪ್ರಮುಖ ಉದ್ದೇಶವು ದೂರಸಂಪರ್ಕ ಮತ್ತು ಐಟಿ (ಮಾಹಿತಿ ತಂತ್ರಜ್ಞಾನ) ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವುದು ಮತ್ತು ಡಿಜಿಟಲ್ ಕ್ರಾಂತಿಯನ್ನು ಗ್ರಾಮೀಣ ಮಟ್ಟಕ್ಕೆ ಕೊಂಡೊಯ್ಯುವುದಾಗಿದೆ.
* ಮಹಾರಾಷ್ಟ್ರದ ಮುಖ್ಯಮಂತ್ರಿ
ದೇವೇಂದ್ರ ಫಡ್ನವೀಸ್
ಅವರು, "ಈ ಒಪ್ಪಂದದಿಂದ ಉತ್ತಮ ಇಂಟರ್ನೆಟ್ ಸೇವೆಯನ್ನು ಸರ್ಕಾರಿ ಸಂಸ್ಥೆಗಳು, ಗ್ರಾಮೀಣ ಪ್ರದೇಶಗಳು ಮತ್ತು ಬುಡಕಟ್ಟು ಪ್ರದೇಶಗಳ ಜನರು ಪಡೆಯಲಿದ್ದಾರೆ" ಎಂದು ತಿಳಿಸಿದ್ದಾರೆ.
* ಸ್ಟಾರ್ಲಿಂಕ್ನೊಂದಿಗೆ ಈ ರೀತಿಯ ಒಪ್ಪಂದ ಮಾಡಿಕೊಂಡ
ದೇಶದ ಮೊದಲ ರಾಜ್ಯ
ಮಹಾರಾಷ್ಟ್ರ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಇದು ಡಿಜಿಟಲ್ ಸಂಪರ್ಕ ಕ್ಷೇತ್ರದಲ್ಲಿ ಮಹಾರಾಷ್ಟ್ರದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
* ಈ ಸಹಕಾರವು ಮಹಾರಾಷ್ಟ್ರದ
ಡಿಜಿಟಲ್ ಮಿಷನ್
,
ಕರಾವಳಿ ಅಭಿವೃದ್ಧಿ
ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ನೆರವಾಗಲಿದೆ.
* ಈ ಯೋಜನೆಯ ಮೊದಲ ಹಂತದಲ್ಲಿ
1500ಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ Starlink
ಸಾಧನಗಳನ್ನು ಸ್ಥಾಪಿಸಲಾಗುತ್ತದೆ. ವಿಶೇಷವಾಗಿ ಸರ್ಕಾರಿ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಗ್ರಾಮ ಪಂಚಾಯಿತಿ ಕಚೇರಿಗಳು ಮತ್ತು ತುರ್ತು ನಿರ್ವಹಣಾ ಕಂಟ್ರೋಲ್ ರೂಮ್ಗಳಿಗೆ ಆದ್ಯತೆ ನೀಡಲಾಗುತ್ತಿದೆ.
* ಈ ಒಪ್ಪಂದದ ಮೂಲ ವಿಷಯವಾಗಿರುವುದು
“Connectivity for All” ಎಂಬ ಗುರಿ
. ದೇಶದ ನಗರ–ಗ್ರಾಮಾಂತರ ಡಿಜಿಟಲ್ ಅಂತರ (Digital Divide) ಹೆಚ್ಚಳವಾಗುತ್ತಿರುವ ವೇಳೆಯಲ್ಲಿ, LEO (Low Earth Orbit) ಉಪಗ್ರಹಾಧಾರಿತ ಸಂಪರ್ಕವನ್ನು ಬಳಸಿ ಗ್ರಾಮೀಣ ಪ್ರದೇಶಗಳನ್ನು ಪ್ರಧಾನ ಡಿಜಿಟಲ್ ವಲಯಕ್ಕೆ ಸೇರಿಸುವ ಪ್ರಯತ್ನವೇ ಇದರ ಕೆಂದ್ರೀಯ ತತ್ವ.
* ಈ ಒಪ್ಪಂದವು ಸಾಂಪ್ರದಾಯಿಕ ಫೈಬರ್ ಅಥವಾ ಮೊಬೈಲ್ ನೆಟ್ವರ್ಕ್ಗಳನ್ನು ತಲುಪಲು ಕಷ್ಟಕರವಾದ ಪ್ರದೇಶಗಳಲ್ಲಿ, ಉಪಗ್ರಹ ತಂತ್ರಜ್ಞಾನದ ಮೂಲಕ
ವೇಗ ಮತ್ತು ವಿಶ್ವಾಸಾರ್ಹ ಇಂಟರ್ನೆಟ್
ಅನ್ನು ಒದಗಿಸುವ ಮೂಲಕ
ಡಿಜಿಟಲ್ ವಿಭಜನೆ (Digital Divide)
ಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಹಾರಾಷ್ಟ್ರ ಸರ್ಕಾರದ ಒಪ್ಪಂದದ ಪ್ರಮುಖ ಉದ್ದೇಶಗಳು:
🎯 ಗ್ರಾಮೀಣ ಪ್ರದೇಶಗಳಿಗೆ ಹೈ–ಸ್ಪೀಡ್ ಉಪಗ್ರಹ ಇಂಟರ್ನೆಟ್ ಒದಗಿಸುವುದು
🏫 ಸರ್ಕಾರಿ ಶಾಲೆಗಳ ಡಿಜಿಟಲ್ ಶಿಕ್ಷಣ ಮೂಲಸೌಕರ್ಯ ಸುಧಾರಣೆ
🏥 ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ ಟೆಲಿಮೆಡಿಸಿನ್ ಸೇವೆ
👮 ಸುರಕ್ಷತಾ ಇಲಾಖೆಗಳ ತುರ್ತು ಸಂವಹನ ವ್ಯವಸ್ಥೆ
📡 ನೆಟ್ವರ್ಕ್ ಇರದ ಪ್ರದೇಶಗಳಿಗೆ ಸಂಪರ್ಕ ಒದಗಿಸುವುದು
Take Quiz
Loading...