* DRDO ಯಶಸ್ವಿ ಗ್ಲೈಡ್ ಬಾಂಬ್ ಪರೀಕ್ಷೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಸುಖೋಯ್-30 ಎಂಕೆಐ ಯುದ್ಧ ವಿಮಾನದಿಂದ 1,000 ಕಿಲೋಗ್ರಾಂ ತೂಕದ 'ಗೌರವ್' ಹೆಸರಿನ ಗ್ಲೈಡ್ ಬಾಂಬ್ನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.* ಈ ಬಾಂಬ್ನ್ನು ನಿಖರ ಗುರಿಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ. ಇದು ಭಾರತದ ಸ್ವದೇಶಿ ಕ್ಷಿಪಣಿ ತಂತ್ರಜ್ಞಾನದಲ್ಲಿ ಮತ್ತೊಂದು ಮಹತ್ವದ ಸಾಧನೆ ಎಂದು ಮನ್ನಣೆ ಪಡೆದಿದೆ. ಈ ಪರೀಕ್ಷೆ ರಾಷ್ಟ್ರದ ರಕ್ಷಣಾ ಶಕ್ತಿಯನ್ನು ಮತ್ತಷ್ಟು ಬಲಪಡಿಸಿದೆ.ಮುಖ್ಯ ಅಂಶಗಳು:- ಏಪ್ರಿಲ್ 8ರಿಂದ 10ರವರೆಗೆ ನಡೆದ ಪರೀಕ್ಷೆಗಳಲ್ಲಿ 'ಗೌರವ್' 100 ಕಿ.ಮೀ ವ್ಯಾಪ್ತಿಯ ಗುರಿಯನ್ನು ನಿಖರವಾಗಿ ತಲುಪಿ ತದನಂತರ ಧ್ವಂಸಗೊಳಿಸಿದೆ.- 'ಗೌರವ್' ಕನಿಷ್ಠ 30 ಕಿ.ಮೀ ದೂರದಿಂದ ಗರಿಷ್ಠ 150 ಕಿ.ಮೀ ದೂರದ ಗುರಿಗಳನ್ನು ನಿಖರವಾಗಿ ನಾಶಪಡಿಸಲು ಸಾಧ್ಯವಿದೆ.ಇದಕ್ಕಾಗಿಯೇ ಡಿಆರ್ಡಿಓ ಈಗಾಗಲೇ 550 ಕೆ.ಜಿ ತೂಕದ 'ಗೌತಮ್' ಎಂಬ ಇನ್ನೊಂದು ಗ್ರೇಡ್ ಬಾಂಬ್ನ್ನೂ ಅಭಿವೃದ್ಧಿಪಡಿಸಿದೆ.- DRDO ಅಭಿವೃದ್ಧಿಪಡಿಸಿದ 1,000 ಕೆಜಿ ‘ಗೌರವ್’ ಗ್ಲೈಡ್ ಬಾಂಬ್.- ಸುಖೋಯ್-30 ಎಂಕೆಐ ಯುದ್ಧ ವಿಮಾನದಿಂದ ಯಶಸ್ವಿ ಉಡಾವಣೆ.- ಗುರಿ ನಿಖರವಾಗಿ ತಲುಪಿಸುವ ಸಾಮರ್ಥ್ಯ.- ಭಾರತದಲ್ಲಿ ತಯಾರಾದ ಸ್ವದೇಶಿ ತಂತ್ರಜ್ಞಾನ.