* ಭಾರತದ ಡಿಆರ್ಡಿಒ ಅಭಿವೃದ್ಧಿಪಡಿಸಿರುವ ಸ್ವದೇಶಿ ಸೂಪರ್ಸಾನಿಕ್ ಟಾರ್ಗೆಟ್ ಕ್ಷಿಪಣಿ ಸ್ಟಾರ್ ಜಗತ್ತಿನ ಗಮನ ಸೆಳೆದಿದೆ. ಇದು ಶತ್ರು ಪಡೆಗಳ ರಾಡಾರ್ ಮತ್ತು ಕಣ್ಣಾವಲು ವಿಮಾನಗಳನ್ನು ಗುರಿಯಾಗಿಸಿ ನಾಶ ಮಾಡುವ ಸಾಮರ್ಥ್ಯ ಹೊಂದಿದೆ.* ಸ್ಟಾರ್ ಕ್ಷಿಪಣಿ ಎರಡು ಆವೃತ್ತಿಗಳಲ್ಲಿದೆ – ಎಲ್ಸಿಎ ತೇಜಸ್ ಯುದ್ಧವಿಮಾನದಿಂದ ಉಡಾಯಿಸಬಹುದಾದ ಆಕಾಶ ಆವೃತ್ತಿ ಹಾಗೂ ನೆಲದಿಂದ ಜಿಗಿಯುವ ಆವೃತ್ತಿ. ಇದನ್ನು ಸೂಕ್ಷ್ಮ ಹಾಗೂ ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಬಹುದು. ಇದರ ವೇಗ ಮ್ಯಾಕ್ 1.8 ರಿಂದ 2.5ರವರೆಗೆ ತಲುಪುತ್ತದೆ.* ಈ ಕ್ಷಿಪಣಿ ಸೇನಾಪಡೆಗಳ ತರಬೇತಿ ಹಾಗೂ ಕಾರ್ಯಾಚರಣೆಗೆ ಸಹಾಯಕವಾಗಿದ್ದು, ವಿದೇಶಿ ವ್ಯವಸ್ಥೆಗಳ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಮರುಬಳಕೆ ಸಾಧ್ಯವಾಗುವ ಕಾರಣ ಇದು ಮಿತವ್ಯಯಿ.* ಸ್ಟಾರ್ನ ತಂತ್ರಜ್ಞಾನವು ದೀರ್ಘಕಾಲದ ಕ್ಷಿಪಣಿ ಅಭಿವೃದ್ಧಿ ಯೋಜನೆಗಳಿಗೆ, ವಿಶೇಷವಾಗಿ ಅಸ್ತ್ರ ಎಂ ಕೆ3 ಹಾಗೂ ರಾಮ್ ಜೆಟ್ ಇಂಜಿನ್ ಕ್ಷೇತ್ರಗಳಿಗೆ ಬಲ ನೀಡಲಿದೆ.* ಮಿಲಿಟರಿ ತಂತ್ರಜ್ಞಾನದಲ್ಲಿ ಆತ್ಮನಿರ್ಭರತೆಗೆ ಇದು ಮಹತ್ವದ ಹೆಜ್ಜೆಯಾಗಿದೆ. ಇತ್ತೀಚೆಗೆ ಭಾರತ ಸ್ವದೇಶಿ ಮಿಲಿಟರಿ ಉತ್ಪಾದನೆಯಲ್ಲಿ ಶೇ.174 ರಷ್ಟು ಪ್ರಗತಿ ಸಾಧಿಸಿದೆ.