* ಎಐಸಿಸಿ ರಾಷ್ಟ್ರೀಯ ಸಂಯೋಜಕಿ ಭವ್ಯ ನರಸಿಂಹ ಮೂರ್ತಿ ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಕಮಿಷನ್ಡ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ. ಅವರು ಲೆಫ್ಟಿನೆಂಟ್ ಹುದ್ದೆಗೆ ಭದ್ರಪಡೆಯಾಗಿ ಕಾಶ್ಮೀರ ಗಡಿಯಲ್ಲಿ ತರಬೇತಿ ಪಡೆದಿದ್ದಾರೆ.* ಭವ್ಯ ಅವರು ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಎಂಬ ಗೌರವವನ್ನು ಪಡೆದುಕೊಂಡಿದ್ದಾರೆ.* 2022ರ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಏಕೈಕ ಮಹಿಳಾ ಅಭ್ಯರ್ಥಿಯೂ ಕೂಡ ಅವರು.* ತಮ್ಮ ಪ್ರತಿಕ್ರಿಯೆಯಲ್ಲಿ ಭವ್ಯ, “ರಾಜಕೀಯವಾಗಿ ಜನರ ಸೇವೆ ಮಾಡುವುದರ ಜೊತೆಗೆ, ಸೇನಾಧಿಕಾರಿಯಾಗಿ ದೇಶದ ಕರೆಯಾದಾಗ ಗಡಿಯಲ್ಲಿ ಸೇವೆ ಮಾಡಲು ಸಿದ್ಧಳಿದ್ದೇನೆ,” ಎಂದು ಹೇಳಿದ್ದಾರೆ.* ಪ್ರಾದೇಶಿಕ ಸೇನೆಯಲ್ಲಿರುವ ಇತರೆ ಪ್ರಮುಖ ವ್ಯಕ್ತಿಗಳಲ್ಲಿ ಎಂ.ಎಸ್. ಧೋನಿ, ಸಚಿನ್ ಪೈಲಟ್ ಹಾಗೂ ಅನುರಾಗ ಠಾಕುರ್ ಅವರಂತವರು ಕೂಡ ಸೇರಿದ್ದಾರೆ.