* ನ.24 ರಂದು ದಕ್ಷಿಣ ಸ್ಪ್ಯಾನಿಷ್ ನಗರವಾದ ಮಲಗಾದಲ್ಲಿ ನಡೆದ ಫೈನಲ್ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 2-0 ಅಂತರದ ಜಯದೊಂದಿಗೆ ಇಟಲಿಗೆ ಸತತ ಎರಡನೇ ಡೇವಿಸ್ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಮೂಲಕ ವಿಶ್ವದ ನಂಬರ್ ಒನ್ ಜಾನಿಕ್ ಸಿನ್ನರ್ ಗಮನಾರ್ಹ ಋತುವನ್ನು ಪೂರ್ಣಗೊಳಿಸಿದರು.* ಫೈನಲ್ ಪಂದ್ಯದಲ್ಲಿ ಸಿನ್ನರ್ ಅವರು ತಲ್ಲೊನ್ ಗ್ರೀಕ್ ರ್ ರನ್ನು 7-6(2), 6-2 ಸೆಟ್ ಗಳ ಅಂತರದಿಂದ ಮಣಿಸುವ ಮೂಲಕ ಇಟಲಿ ತಂಡವು ಎದುರಾಳಿ ನೆದರ್ಲ್ಯಾಂಡ್ಸ್ ತಂಡವನ್ನು 2-0 ಅಂತರದಿಂದ ಮಣಿಸಿದೆ.* "ನನಗೆ, ಡೇವಿಸ್ ಕಪ್ ಆಡುವುದು ಬಹಳ ಮುಖ್ಯ ಏಕೆಂದರೆ ನನ್ನ ಭುಜದ ಮೇಲೆ ಇಟಲಿಯನ್ನು ಹೊಂದುವ ಒತ್ತಡವನ್ನು ನಾನು ಆನಂದಿಸುತ್ತೇನೆ" ಎಂದು ಸಿನ್ನರ್ ಹೇಳಿದರು.* ಝಕ್ ಗಣರಾಜ್ಯದ ನಂತರ ಸತತ ಎರಡು ಡೇವಿಸ್ ಕಪ್ ಗೆದ್ದ ಮೊದಲ ದೇಶವೆಂಬ ಕೀರ್ತಿಗೆ ಇಟಲಿ ಪಾತ್ರವಾಯಿತು. ಝಕ್ ತಂಡವು 2012 ಹಾಗೂ 2013ರಲ್ಲಿ ಈ ಸಾಧನೆ ಮಾಡಿತ್ತು.* ಇಟಲಿಯ ಮಹಿಳೆಯರ ತಂಡ ಬುಧವಾರ ಸ್ಪೋವಾಕಿಯಾ ತಂಡವನ್ನು ಸೋಲಿಸಿ ಬಿಲ್ಲಿ ಜೀನ್ ಕಿಂಗ್ ಕಪ್ ಜಯಿಸಿತ್ತು.