Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
'ಡೇಟನ್ ಜೀವಮಾನ' ಸಾಧನೆ ಪ್ರಶಸ್ತಿಗೆ ಸಲ್ಮಾನ್ ರಶ್ದಿ ಆಯ್ಕೆ
11 ನವೆಂಬರ್ 2025
* ಪ್ರಸಿದ್ಧ ಭಾರತೀಯ ಮೂಲದ
ಬ್ರಿಟಿಷ್ ಲೇಖಕ ಸಲ್ಮಾನ್ ರಶ್ದಿ
ಅವರಿಗೆ 2025ರಲ್ಲಿ “
ಡೇಟನ್ ಲಿಟರರಿ ಪೀಸ್ ಪ್ರೈಝ್ – ಲೈಫ್ಟೈಮ್ ಅಚೀವ್ಮೆಂಟ್ ಅವಾರ್ಡ್”
ಅನ್ನು ಓಹಿಯೋದಲ್ಲಿ ನಡೆದ ಡೇಟನ್ ಸಾಹಿತ್ಯ ಶಾಂತಿ ಪ್ರಶಸ್ತಿ ಸಮಾರಂಭದಲ್ಲಿ ಪ್ರದಾನ ಮಾಡಲಾಗಿದೆ.
* ಮೂರೂ ವರ್ಷಗಳ ಹಿಂದೆ
ನ್ಯೂಯಾರ್ಕ ನಗರದಲ್ಲಿ
ನಡೆದಿದ್ದ ಉಪನ್ಯಾಸ ಕಾರ್ಯಕ್ರಮದ ವೇದಿಕೆಯಲ್ಲಿ ರಶ್ದಿ ಅವರ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದ.ಈ ಘಟನೆಯಿಂದ ಇವರು
ತಮ್ಮ ಬಲಗಣ್ಣನ್ನು ಕಳೆದುಕೊಂಡಿದ್ದರು
.
* ಈ ಘಟನೆಯ ಬಳಿಕ ಅವರು ಕಾದಂಬರಿಯನ್ನು ಪ್ರಕಟಿಸಿದ ನಂತರ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
* ಜಾಗತಿಕ ಸಾಹಿತ್ಯಕ್ಕೆ ಅವರ ನೀಡಿದ ದೀರ್ಘಕಾಲದ ಕೊಡುಗೆ, ಸಂವಾದವನ್ನು ಉತ್ತೇಜಿಸುವ ಕಾರ್ಯ, ಹಾಗೂ ಸ್ವಾತಂತ್ರ್ಯಪೂರ್ಣ ಬರಹಗಳಿಗಾಗಿ ಈ ಪ್ರಶಸ್ತಿ ಗೌರವಿಸಲಾಯಿತು.
📚
ಡೇಟನ್ ಲಿಟರರಿ ಪೀಸ್ ಪ್ರೈಝ್ ಎಂದರೇ:
ಈ ಪ್ರಶಸ್ತಿಯನ್ನು ಅಮೆರಿಕಾದ ಡೇಟನ್ ನಗರವು ಶಾಂತಿ, ಸಂವಾದ ಮತ್ತು ಮಾನವೀಯ ಮೌಲ್ಯಗಳನ್ನು ಪ್ರೋತ್ಸಾಹಿಸುವ ಸಾಹಿತ್ಯಕ್ಕೆ ನೀಡುತ್ತದೆ.
* ಜಗತ್ತಿನಲ್ಲಿಯೇ ಶಾಂತಿಯನ್ನು ಉತ್ತೇಜಿಸುವ ಕಥನ ಸಾಹಿತ್ಯಕ್ಕೆ ಇದು
ಏಕೈಕ ಮತ್ತು ಪ್ರಮುಖ ಅಂತಾರಾಷ್ಟ್ರೀಯ ಪ್ರಶಸ್ತಿ
ಯಾಗಿದೆ. ಜೀವನ ಸಾಧನೆ ವಿಭಾಗವು ವಿಶೇಷವಾಗಿ ಯಾರು ದೀರ್ಘಕಾಲ ಸಾಹಿತ್ಯದ ಮೂಲಕ ಸಮಾಜಕ್ಕೆ ಪ್ರೇರಣೆ ನೀಡಿದ್ದಾರೆ ಅವರಿಗೆ ಮಾತ್ರ ನೀಡಲಾಗುತ್ತದೆ.
* ಸಲ್ಮಾನ್ ರಶ್ದಿ ಅವರ ಕೃತಿಗಳು ಪೌರಾಣಿಕತೆ, ಐತಿಹಾಸಿಕ ಘಟನೆಗಳು ಮತ್ತು ಮಾನವ ಮನೋವಿಜ್ಞಾನದ ಸಂಧಿಯನ್ನು ಬಿಂಬಿಸುತ್ತವೆ.
* ಪ್ರಶಸ್ತಿ ಸ್ವೀಕರಿಸುವ ವೇಳೆ ರಶ್ದಿ ಅವರು ಸಾಹಿತ್ಯವು ಮಾನಸಿಕ ಸ್ವಾತಂತ್ರ್ಯ ಮತ್ತು ಮಾನವೀಯತೆಯ ಶಕ್ತಿ ಹೊಂದಿದೆ ಮತ್ತು ಬರಹಗಾರರು ಸಮಾಜದಲ್ಲಿ ಇರುವ ಅನ್ಯಾಯವನ್ನು ಪ್ರಶ್ನಿಸಬೇಕು ಹಾಗೂ ತನ್ನ ಬರಹ ಜನರಲ್ಲಿ ಚಿಂತನೆ ಮತ್ತು ಮಾತುಗಳ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸಲಿ ಎಂದು ಆಶಿಸಿದ್ದಾರೆ.
✍️
ರಶ್ದಿ ಅವರ ಪ್ರಮುಖ ಕೃತಿಗಳು:
- Midnight’s Children (ಬುಕರ್ ಪ್ರಶಸ್ತಿ)
- The Satanic Verses
- The Golden House
- Quichotte
“ಮಿಡ್ನೈಟ್ಸ್ ಚಿಲ್ಡ್ರನ್” ಕೃತಿ 20ನೇ
ಶತಮಾನದ ಅತ್ಯುತ್ತಮ ಕಾದಂಬರಿಗಳಲ್ಲಿ ಸ್ಥಾನ ಪಡೆದಿದೆ.
*
The Satanic Verses ಕೃತಿಯಿಂದಾಗಿ 1980ರ ದಶಕ
ದಲ್ಲಿ ಜಾಗತಿಕ ಮಟ್ಟದಲ್ಲಿ ವಿವಾದ ಭುಗಿಲೆದ್ದಿತು, ಇದರಿಂದ ರಶ್ದಿ ಹಲವು ವರ್ಷಗಳು ರಹಸ್ಯ ಸರ್ಕಾರ ಕಾವಲಿನಲ್ಲಿ ಬದುಕಿದರು ಮತ್ತು
‘ಫತ್ವಾ’
ಘೋಷಿಸಲಾಯಿತು ಹಾಗೂ 2022ರಲ್ಲಿ ವೇದಿಕೆಯ ಮೇಲೆ ಅವರ ಮೇಲೆ ಹಲ್ಲೆ ಕೂಡ ನಡೆಯಿತು.ಇವುಗಳ ನಡುವೆಯೂ ಅವರು ಬರಹದ ಸ್ವಾತಂತ್ರ್ಯವನ್ನು ತ್ಯಜಿಸದೆ ಸದೃಢವಾಗಿ ನಿಂತರು.
Take Quiz
Loading...