* ಜರ್ಮನಿಯ ಬಯಾಥ್ಲಾನ್ ಒಲಂಪಿಕ್ಸ್ ಚಾಂಪಿಯನ್ ಲಾರಾ ಡಹ್ಲ್ಮಿಯರ್ ಪಾಕಿಸ್ತಾನದ ಕಾರಕೋರಂ ಪರ್ವತ ಶ್ರೇಣಿಯಲ್ಲಿ ಪರ್ವತಾರೋಹಣದ ವೇಳೆ ಸಾವಿಗೀಡಾದರು.* 18,700 ಅಡಿ ಎತ್ತರದ ಲೈಲಾ ಶಿಖರ ಹತ್ತುವಾಗ ಅವರು ಬಂಡೆಯ ಮೇಲೆ ಬಿದ್ದು, ಬಂಡೆ ನಡುವಿನಲ್ಲಿ ಸಿಲುಕಿಕೊಂಡಿದ್ದರು.* ಸ್ನೇಹಿತರು ಕೂಡಲೇ ರಕ್ಷಿಸಲು ಪ್ರಯತ್ನಿಸಿದರೂ, ಕೆಟ್ಟ ಹವಾಮಾನದ ಕಾರಣದಿಂದ ಹೆಲಿಕಾಪ್ಟರ್ ಮೂಲಕ ರಕ್ಷಣೆಗೆ ಆಗಲಿಲ್ಲ. ಮ್ಯಾನೇಜ್ಮೆಂಟ್ ಕಂಪನಿಯ ಪ್ರಕಾರ, ಹಲವಾರು ಪ್ರಯತ್ನಗಳಾದರೂ ಅವರು ಸಾವನ್ನಪ್ಪಿದ್ದಾರೆ.* ಚೆಕ್ ರಿಪಬ್ಲಿಕ್ನ ಬಯಾಥ್ಲಾನ್ ಚಾಂಪಿಯನ್ ಗೇಬ್ರಿಯೆಲಾ ಸೌಕಲೋವಾ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಅಧಿಕಾರಿಗಳ ಪ್ರಕಾರ, ದೇಹ ಲಭಿಸಿಲ್ಲ ಮತ್ತು ಹುಡುಕಾಟ ಮುಂದುವರೆದಿದೆ.* ಲಾರಾ ಅವರು ಏಳು ವಿಶ್ವ ಚಾಂಪಿಯನ್ಶಿಪ್ ಚಿನ್ನದ ಪದಕ ಹಾಗೂ 2018ರ ಪಿಯೊಂಗ್ಚಾಂಗ್ ಚಳಿಗಾಲದ ಒಲಿಂಪಿಕ್ಸ್ನಲ್ಲಿ ಡಬಲ್ ಚಿನ್ನದ ಪದಕ ಗೆದ್ದ ಇತಿಹಾಸವನ್ನು ಹೊಂದಿದ್ದಾರೆ.