* ಕರ್ನಾಟಕದಲ್ಲಿ 2022 ಕ್ಕೆ ಹೋಲಿಸಿದರೆ 2023 ರಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕಡಿಮೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ ಎಂದು ಡಿಸೆಂಬರ್ ನಲ್ಲಿ ಕೇಂದ್ರ ಜಲಾಶಕ್ತಿ ಸಚಿವಾಲಯ ಬಿಡುಗಡೆ ಮಡಿದ ವರದಿ ಮತ್ತು ಅಂಕಿ, ಅಂಶ ತಿಳಿಸುತ್ತವೆ.* 'ಡೈನಾಮಿಕ ಗ್ರೌಂಡ್ ವಾಟರ್ ರಿಸೋರ್ಸಸ್ ಆಫ್ ಇಂಡಿಯಾ 2033' ವರದಿ ರಾಜ್ಯದ ಅಂತರ್ಜಲ ದುಸ್ಥಿತಿ ಮೇಲೆ ಬೆಳಕು ಚೆಲ್ಲುತ್ತದೆ.* 2023 ರಲ್ಲಿ ವಾರ್ಷಿಕ ಅಂತರ್ಜಲ ಹೊರತೆಗೆಯುವಿಕೆ 241.34 BCM ನಲ್ಲಿ ವರದಿಯಾಗಿದೆ. ನೀರಾವರಿ ಕ್ಷೇತ್ರವು ಅತಿದೊಡ್ಡ ಗ್ರಾಹಕವಾಗಿದೆ, ಒಟ್ಟು ವಾರ್ಷಿಕ ಅಂತರ್ಜಲದ 87% ಅನ್ನು ಬಳಸಿಕೊಳ್ಳುತ್ತದೆ. * ಏಳು ನದಿಗಳಿರುವ ಬೆಳಗಾವಿ ಸೇರಿದಂತೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಹಳೆ ಮೈಸೂರು ಭಾಗದಲ್ಲಿ ಅಂತರ್ಜಲ ಕುಸಿತ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಲ್ಲಿ 'ಭವಿಷ್ಯದ ಬಳಕೆಗಾಗಿ ನಿವ್ವಳ ಅಂತರ್ಜಲ ಲಭ್ಯತೆ' ಶೂನ್ಯಕ್ಕೆ ಇಳಿದಿವೆ. * ಅಂತರ್ಜಲ ಅತಿ ಬಳಕೆ ಮಾಡುವ ತಾಲ್ಲೂಕುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಆದರೆ, ವ್ಯಾಪಕ ಮಳೆ ಸುರಿಯುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಮತ್ತಿತರ ಜಿಲ್ಲೆಗಳಲ್ಲಿ ಅಂತರ್ಜಲ ಕೊಳ್ಳೆ ವ್ಯಾಪಕವಾಗಿ ಏರಿಕೆಯಾಗಿದೆ.* ಭಾರತವು ತನ್ನ ಅಂತರ್ಜಲದಲ್ಲಿ ಶೇ 50ರಷ್ಟನ್ನು ಬಳಸುತ್ತಿದೆ. ಅದರಲ್ಲಿ ಶೇ 90ರಷ್ಟನ್ನು ಕೃಷಿಗೆ ಬಳಸಲಾಗುತ್ತಿದೆ. ಆದರೆ ಬೇರೆ ದೇಶದಲ್ಲಿ ಇದು ಶೇ 50 ರಿಂದ 60 ರಷ್ಟಿದೆ.* ಅಂತರ್ಜಲದ ಬಳಕೆ ಮತ್ತು ಮರುಪೂರಣ ವೈಜ್ಞಾನಿಕವಾಗಿ ನಡೆಯಬೇಕು ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಜಲ ಸಂಪನ್ಮೂಲ ಮತ್ತು ಪರಿಸರ ಎಂಜಿನಿಯರಿಂಗ್ ವಿಭಾಗದ ಪ್ರೊ.ಶೇಖರ್ ಮದ್ದು ಅವರು ವಿವರಿಸಿದ್ದಾರೆ.* ಅಂತರ್ಜಲ ಅತಿ ಬಳಕೆಯ ಜಿಲ್ಲೆಗಳು : ಕೋಲಾರ - 172ಬೆಂಗಳೂರು ಗ್ರಾ. - 154ಚಿಕ್ಕಬಳ್ಳಾಪುರ - 153ಬೆಂಗಳೂರು ನಗರ - 150ಚಿತ್ರದುರ್ಗ - 132ಚಾಮರಾಜನಗರ - 96.53ರಾಮನಗರ - 95.77ತುಮಕೂರು - 91.77ದಾವಣಗೆರೆ - 88.91ಬಾಗಲಕೋಟೆ - 88.71