* ಡಾಲರ್ ಎದುರು ರೂಪಾಯಿ ಮೌಲ್ಯ "ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ" ಕುಸಿದಿದ್ದು, ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿತ ಕಂಡಿದೆ.* ರೂಪಾಯಿ ಮೌಲ್ಯ 23 ಪೈಸೆ ಇಳಿಕೆಯಾಗಿದ್ದು, ಪ್ರತೀ ಡಾಲರ್ ಮೌಲ್ಯವು ಮೊದಲ ಬಾರಿಗೆ ₹86.27ಕ್ಕೆ ಮುಟ್ಟಿದೆ.* ರೂಪಾಯಿ ಮೌಲ್ಯ 23 ಪೈಸೆ ಇಳಿಕೆಯಾಗಿದ್ದು, ಪ್ರತೀ ಡಾಲರ್ ₹86.27ಕ್ಕೆ ತಲುಪಿದೆ. ವಿದೇಶಿ ಬಂಡವಾಳ ಹೊರಹರಿವು, ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿಕೆ, ಹಾಗೂ ಅಮೆರಿಕದ ಬಾಂಡ್ ಗಳಿಕೆಯು ದೇಶೀಯ ಮಾರುಕಟ್ಟೆಯ ಮೇಲೆ ಒತ್ತಡ ತಂದಿದ್ದು, ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.* ಡಾಲರ್ ವಿರುದ್ಧ ರೂಪಾಯಿ ಮೌಲ್ಯವು ಇದುವರೆಗಿನ ಕನಿಷ್ಠ ಮಟ್ಟವನ್ನು ತಲುಪಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ, ಒಂದು ಡಾಲರ್ ಮೌಲ್ಯ 86.4 ರೂಪಾಯಿಗೆ ತಲುಪಿದೆ" ಎಂದು ಪ್ರಿಯಾಂಕಾ ಗಾಂಧಿ X ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.