* ಸ್ಪೇಡೆಕ್ಸ್' ಯೋಜನೆಯಡಿ ಬಾಹ್ಯಾಕಾಶದಲ್ಲಿ ಜೋಡಣೆ ಪ್ರಯೋಗ ಉದ್ದೇಶದಿಂದ ಉಡ್ಡಯನ ಮಾಡಿರುವ ಎರಡು ಉಪಗ್ರಹಗಳು ಶುಕ್ರವಾರ(ಜನವರಿ 10) ರಾತ್ರಿ 1.5 ಕಿ.ಮೀ. ಅಂತರದಲ್ಲಿದ್ದವು ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.* 'ಶನಿವಾರದ ಬೆಳಿಗ್ಗೆ ವೇಳೆಗೆ, ಉಪಗ್ರಹಗಳ ನಡುವಿನ ಅಂತರ 500 ಮೀ. ಇರುವಂತೆ ಮಾಡಲಾಗುವುದು' ಎಂದಿದೆ.* ಯೋಜನೆ ಪ್ರಕಾರ, ಅಂತರವನ್ನು ಮೊದಲು 15 ಮೀಟರ್ ಮತ್ತು ನಂತರ 3 ಮೀಟರ್ಗೆ ಇಳಿಸಿ ಜೋಡಣೆ ಪ್ರಕ್ರಿಯೆ(ಡಾಕಿಂಗ್) ರೂಪಿಸಲಾಗಿದೆ. ಆದರೆ ಡಾಕಿಂಗ್ ಕಾರ್ಯಗತವಾಗುವ ಸಮಯದ ಬಗ್ಗೆ ಸ್ಪಷ್ಟತೆ ಇಲ್ಲ.* ಇಸ್ರೋ ಎರಡು ಉಪಗ್ರಹಗಳನ್ನು ಜನವರಿ.7ರಂದು ಡಾಕಿಂಗ್ ಮಾಡಲು ಯೋಜಿಸಿತ್ತು. ಆದರೆ ಅವುಗಳ ನಡುವಿನ ಅಂತರ ನಿರೀಕ್ಷೆಗೆ ಹೋಲಿಸಿದಂತೆ ಹೆಚ್ಚು ಇದ್ದ ಕಾರಣ ಜನವರಿ 9ಕ್ಕೆ ಮುಂದೂಡಿತ್ತು. ಇದು ಸಹ ಮುಂಡೂಡಲ್ಪಟ್ಟಿದೆ.* ಇಸ್ರೋ ಡಿಸೆಂಬರ್ 30ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎರಡು ಉಪಗ್ರಹಗಳನ್ನು ಉಡಾವಣೆಗೊಳಿಸಿತ್ತು.* ಈ ಸಾಧನೆಯಿಂದ ಭಾರತವು ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಮುಂದಿನ ಬಾಹ್ಯಾಕಾಶ ತಂತ್ರಜ್ಞಾನವನ್ನು ಹೊಂದಲಿದೆ, ಏಕೆಂದರೆ ಈ ತಂತ್ರಜ್ಞಾನ ಈಗಾಗಲೇ ಅಮೆರಿಕ, ರಷ್ಯಾ ಮತ್ತು ಚೀನಾ ಬಳಿ ಇದೆ.