* ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ ಏಪ್ರಿಲ್ 14ರಂದು ಸಾರ್ವತ್ರಿಕ ರಜೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.* ಅಂಬೇಡ್ಕರ್ ಜಯಂತಿಯಂದು ದೇಶದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಿಗೆ ರಾಷ್ಟ್ರೀಯ ರಜೆ ಇರುವುದು ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಶನಿವಾರ ಪ್ರಕಟಿಸಿದರು.* ಸಮಾಜದಲ್ಲಿ ಸಮಾನತೆಯ ಹೊಸ ಯುಗವನ್ನು ರೂಪಿಸಿದ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಜನ್ಮವಾರ್ಷಿಕೋತ್ಸವದಂದು ಇನ್ನು ಮುಂದೆ ಸಾರ್ವಜನಿಕ ರಜೆ ಇರುವುದು.* ಏಪ್ರಿಲ್ 14, ಸೋಮವಾರದಂದು ದೇಶದಾದ್ಯಂತ ಕೈಗಾರಿಕಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಕೇಂದ್ರ ಸರಕಾರಿ ಕಚೇರಿಗಳು ಮುಚ್ಚಲಿವೆ. ಈ ನಿರ್ಧಾರವನ್ನು ಸಂಬಂಧಪಟ್ಟ ಎಲ್ಲರಿಗೂ ತಿಳಿಸಲು ಸೂಚಿಸಲಾಗಿದೆ.* ಬಾಬಾ ಸಾಹೇಬರ ಅನುಯಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರ ಭಾವನೆಗಳಿಗೆ ತಕ್ಕಂತೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಚಿವ ಶೇಖಾವತ್ 'ಎಕ್ಸ್' ನಲ್ಲಿ ಪ್ರಕಟಿಸಿದರು.