* ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ (ಎಚ್ಎಎಲ್) ವಿಮಾನ ವಿಭಾಗದ ಕನ್ನಡ ಸಂಘವು ನೀಡುವ ‘ಕನ್ನಡ ಕಾಯಕಶ್ರೀ’ ಪ್ರಶಸ್ತಿಗೆ ಕವಿ ಬಿ.ಆರ್. ಲಕ್ಷ್ಮಣರಾವ್ ಅವರನ್ನು ಆಯ್ಕೆ ಮಾಡಲಾಗಿದೆ.* ಲಕ್ಷ್ಮಣರಾವ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಾಗಿ ಈ ಗೌರವ ಲಭಿಸಿದೆ. ಪ್ರಶಸ್ತಿಯು ₹20 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ.* ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 22ರಂದು ಎಚ್ಎಎಲ್ ಬಳಿ ಇರುವ ವಿ.ಎಂ. ಘಾಟ್ಗೆ ಸಭಾಂಗಣದಲ್ಲಿ ನಡೆಯಲಿದೆ.* ಕಾರ್ಯಕ್ರಮವನ್ನು ಹೃದಯರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಉದ್ಘಾಟಿಸಲಿದ್ದು, ಎಚ್ಎಎಲ್ ವಿಮಾನ ವಿಭಾಗದ ಮಹಾ ವ್ಯವಸ್ಥಾಪಕ ವಿ. ಶ್ರೀಕೃಷ್ಣ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ.