Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ವಾಯುಪಡೆಗೆ 114 ರಫೇಲ್ ಬಲ: ₹3.25 ಲಕ್ಷ ಕೋಟಿ ಮೊತ್ತದ ಬೃಹತ್ ರಕ್ಷಣಾ ಖರೀದಿಗೆ ಚಾಲನೆ
Authored by:
Akshata Halli
Date:
13 ಫೆಬ್ರುವರಿ 2026
➤ ಭಾರತೀಯ ವಾಯುಪಡೆಯ (IAF) ಬಲವರ್ಧನೆಗೆ ಮತ್ತು ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ಕೇಂದ್ರ ಸರ್ಕಾರವು ಒಂದು ಬೃಹತ್ ನಿರ್ಧಾರವನ್ನು ಕೈಗೊಂಡಿದೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮಾಕ್ರನ್ ಅವರ ಭಾರತ ಭೇಟಿಯ ಮುನ್ನಾದಿನದಂದು,
ರಕ್ಷಣಾ ಖರೀದಿ ಮಂಡಳಿ (DAC)
114 ಮಲ್ಟಿ-ರೋಲ್ ಫೈಟರ್ ಏರ್ಕ್ರಾಫ್ಟ್ (MRFA) ಖರೀದಿಯ ಪ್ರಸ್ತಾವನೆಗೆ ಪ್ರಾಥಮಿಕ ಚಾಲನೆ ನೀಡಿದೆ.
➤ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ
ರಕ್ಷಣಾ ಖರೀದಿ ಮಂಡಳಿ (DAC)
ಸುಮಾರು
₹3.25 ಲಕ್ಷ ಕೋಟಿ
ಮೌಲ್ಯದ ರಕ್ಷಣಾ ಸಾಮಗ್ರಿಗಳ ಖರೀದಿಗೆ 'ಅವಶ್ಯಕತೆಯ ಅಂಗೀಕಾರ' (AoN) ನೀಡಿದೆ.
=>
ಒಟ್ಟು ವಿಮಾನಗಳು:
114 ರಫೇಲ್ ಯುದ್ಧ ವಿಮಾನಗಳು.
-
88 ಸಿಂಗಲ್ ಸೀಟರ್
(ಏಕ ಆಸನ) ಆವೃತ್ತಿ.
-
26 ಟ್ವಿನ್ ಸೀಟರ್
(ದ್ವಿ ಆಸನ) ತರಬೇತಿ ಆವೃತ್ತಿ.
=>
ಮೇಕ್ ಇನ್ ಇಂಡಿಯಾ'ಗೆ ಒತ್ತು:
114 ವಿಮಾನಗಳ ಪೈಕಿ
18 ವಿಮಾನಗಳನ್ನು
ಫ್ರಾನ್ಸ್ನ ಡಾಸೊ ಏವಿಯೇಷನ್ ನೇರವಾಗಿ ಪೂರೈಸಲಿದೆ. ಉಳಿದ
96 ವಿಮಾನಗಳನ್ನು
ಭಾರತದಲ್ಲೇ ತಯಾರಿಸಲು ನಿರ್ಧರಿಸಲಾಗಿದೆ.
=> ಭಾರತದಲ್ಲಿ ತಯಾರಾಗುವ ವಿಮಾನಗಳಲ್ಲಿ ಸುಮಾರು
50% ರಿಂದ 60% ರಷ್ಟು ಸ್ವದೇಶಿ ಬಿಡಿಭಾಗಗಳನ್ನು
ಬಳಸಲಾಗುವುದು. ಇದು ಭಾರತದ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
=>
ಭಾರತವು ತನ್ನದೇ ಆದ ಸ್ವದೇಶಿ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ಈ ರಫೇಲ್ ವಿಮಾನಗಳಲ್ಲಿ ಅಳವಡಿಸಲು ಸಂಪೂರ್ಣ ಅಧಿಕಾರ ಹೊಂದಿರಲಿದೆ.
➤ ರಫೇಲ್ ಜೊತೆಗೆ, ಅಮೆರಿಕಾದಿಂದ ಹೆಚ್ಚುವರಿ
6 ಪಿ-8ಐ (P-8I) ಕಡಲ ಕಣ್ಗಾವಲು
ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ ವಿಮಾನಗಳನ್ನು ಖರೀದಿಸಲು ಡಿಎಸಿ ಅನುಮೋದನೆ ನೀಡಿದೆ. ಇವುಗಳ ಅಂದಾಜು ವೆಚ್ಚ ₹28,000 ಕೋಟಿ ಎಂದು ತಿಳಿದುಬಂದಿದೆ.
➤
ಇತರ ಪ್ರಮುಖ ರಕ್ಷಣಾ ಯೋಜನೆಗಳು:
=> ಡಾರ್ನಿಯರ್-228 ಖರೀದಿ:
ಭಾರತೀಯ ಕರಾವಳಿ ರಕ್ಷಣಾ ಪಡೆಗೆ (ICG) ಎಂಟು ಡಾರ್ನಿಯರ್-228 ವಿಮಾನಗಳನ್ನು ಖರೀದಿಸಲು ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್ (HAL) ನೊಂದಿಗೆ ₹2,300 ಕೋಟಿಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
=>
ವೈಬ್ರೋ ಆಂಟಿ-ಟ್ಯಾಂಕ್ ಮೈನ್ಸ್:
ಶತ್ರುಗಳ ಟ್ಯಾಂಕ್ಗಳನ್ನು ತಡೆಯಲು 'ವೈಬ್ರೋ' ಗಣಿಗಳನ್ನು ಖರೀದಿಸಲು ನಿರ್ಧರಿಸಲಾಗಿದೆ.
=>
AS-HAPS ಸಿಸ್ಟಮ್:
ಸುಮಾರು ₹25,000 ಕೋಟಿ ವೆಚ್ಚದಲ್ಲಿ ಹೈ ಆಲ್ಟಿಟ್ಯೂಡ್ ಸ್ಯೂಡೋ ಸ್ಯಾಟಲೈಟ್ (AS-HAPS) ತಂತ್ರಜ್ಞಾನಕ್ಕೆ ಒಪ್ಪಿಗೆ ನೀಡಲಾಗಿದೆ.
➤ ಭಾರತೀಯ ವಾಯುಪಡೆಯು ಪ್ರಸ್ತುತ ಕೇವಲ
29 ಸ್ಕ್ವಾಡ್ರನ್ಗಳನ್ನು
ಹೊಂದಿದೆ, ಆದರೆ ದೇಶದ ಭದ್ರತೆಯ ದೃಷ್ಟಿಯಿಂದ ಕನಿಷ್ಠ
42 ಸ್ಕ್ವಾಡ್ರನ್ಗಳ
ಅಗತ್ಯವಿದೆ (ಒಂದು ಸ್ಕ್ವಾಡ್ರನ್ನಲ್ಲಿ 16-18 ವಿಮಾನಗಳಿರುತ್ತವೆ). ಹಳೆಯದಾಗುತ್ತಿರುವ ಮಿಗ್ (MiG) ವಿಮಾನಗಳ ನಿವೃತ್ತಿಯಿಂದ ಉಂಟಾಗಿರುವ ಕೊರತೆಯನ್ನು ನೀಗಿಸಲು ಈ 114 ರಫೇಲ್ ವಿಮಾನಗಳು ನಿರ್ಣಾಯಕ ಪಾತ್ರ ವಹಿಸಲಿವೆ.
ಜನೆವರಿ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Take Quiz
Loading...