Job Description: * ಕನ್ನಡ ಚಿತ್ರರಂಗದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್‌ 'ರಾಮ್ ರಾಜ್'ನ ಬ್ರ್ಯಾಂಡ್‌ ರಾಯಭಾರಿಯಾಗಿ ನೇಮಕವಾಗಿದ್ದಾರೆ ಎಂದು ರಾಮ್‌ರಾಜ್‌ ಕಾಟನ್‌ ಮಾಹಿತಿ ನೀಡಿದೆ. * ನಟ ಯಶ್ ಅವರು ನಟನೆ ಹಾಗೂ ಲೋಕೋಪಕಾರಿ ಕೆಲಸಗಳ ಮೂಲಕ ತಮ್ಮ ಸುತ್ತಲಿನ ಜನರಿಗೆ ಮಾದರಿಯಾಗಿದ್ದಾರೆ. ಈ ಹಿನ್ನಲೆಯಿಂದಾಗಿ 'ಯಶ'ರನ್ನು 'ರಾಮ್ ರಾಜ್'ನ ರಾಯಭಾರಿ ಆಗಿ ನೇಮಕ ಮಾಡಿರುವದು ನಮಗೆ ಖುಷಿಯ ವಿಚಾರವಾಗಿದೆ ಎಂದು ತಿಳಿಸಿದ್ದಾರೆ. * ಈ ಹಿಂದೆ 1983 ರಲ್ಲಿ ರಾಮ್‌ರಾಜ್ ಕಾಟನ್ ನ್ನು ಸ್ಥಾಪನೆ ಮಾಡಲಾಗಿದೆ, ಇದು ಧೋತಿಗಳು, ಶರ್ಟ್‌ಗಳು, ಒಳ ಉಡುಪುಗಳು, ನಿಟ್ ವೇರ್‌ಗಳು, ಬಟ್ಟೆಗಳು, ಮಕ್ಕಳು ಹಾಗೂ ಮಹಿಳೆಯರ ಸಂಗ್ರಹದ ಸ್ಟಾರ್ ಪ್ರೊಡಕ್ಷನ್ ಹೌಸ್ ಆಗಿದೆ. ಪ್ರಸ್ತುತ ರಾಮರಾಜ್ ಕಾಟನ್ ಪ್ರತಿಯೊಬ್ಬ ಭಾರತೀಯನ ಜೀವನ ಶೈಲಿಗೆ ಮೌಲ್ಯವರ್ಧನೆಗೆ ಒಲವನ್ನು ನೀಡುತ್ತಿದೆ. * ಪ್ರಸ್ತುತ ರಾಮರಾಜ್ ಕಾಟನ್ ಕಂಪನಿಯು ತಮಿಳುನಾಡಿನ ಕೊಯಮತ್ತೂರಿನ ಜವಳಿ ನಗರಕ್ಕೆ ಹತ್ತಿರವಿರುವ ತಿರುಪುರ್‌ನಲ್ಲಿ ನೆಲೆಗೊಂಡಿದೆ, ಇದೊಂದು ಭಾರತೀಯ ನಿಟ್ ಗಾರ್ಮೆಂಟ್ ಉದ್ಯಮದ ಕೇಂದ್ರವಾಗಿದೆ. ಉದ್ಯಮಶೀಲ ತಂತ್ರಜ್ಞ ಶ್ರೀ.ಕೆ.ಆರ್.ನಾಗರಾಜನ್ ಅವರು ಈ ಕಂಪನಿಯನ್ನು ಸ್ಥಾಪಿಸಿದ್ದಾರೆ. ಈ ರಾಮರಾಜ್ ಕಂಪನಿಯು ಹತ್ತಿಯ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಈ ಕಂಪನಿಯು ಧೋತಿಗಳ ವ್ಯಾಪಕವಾದ ಮಾನ್ಯತೆಯ ಜೊತೆಗೆ ಆರಂಭವಾಗಿದೆ, ಅಷ್ಟೇ ಅಲ್ಲದೇ ಅವುಗಳನ್ನು ಭಾರತೀಯ ಸಾಂಸ್ಕೃತಿಕ ಶೈಲಿಯಾಗಿ ಮಾರಾಟ ಮಾಡಲಾಗುತ್ತದೆ ಹಾಗೂ ಪಟ್ಟಣದಿಂದ ಹಳ್ಳಿಗಳಿಗೆ ತಲುಪಿಸುತ್ತಿದೆ. * ನವೀನ್ ಕುಮಾರ್ ಗೌಡ ಅವರು ರಂಗನಾಮ ಯಶ್‌ನಿಂದ ಪ್ರಸಿದ್ಧರಾಗಿದ್ದಾರೆ, ಅವರು ಮುಖ್ಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟ, ಹಾಗೂ ಚಲನಚಿತ್ರ ರಂಗದಲ್ಲಿ ಅತ್ಯಂತ ಯಶಸ್ವಿ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದಾರೆ. * ನಟ ಯಶ ಅವರು 2008 ರಲ್ಲಿ ಮೊಗ್ಗಿನ ಮನಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇತ್ತೀಚಿಗೆ ಇವರು ಕೆಜಿಎಫ್: ಅಧ್ಯಾಯ 1 ಎಂಬ ಸಿನಿಮಾದ ಮೂಲಕ ಒಳ್ಳೆಯ ಹೆಸರನ್ನು ಸಂಪಾದಿಸಿದ್ದಾರೆ.