Job Description: * ಪ್ರಸ್ತುತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಪರಿಸರ ಹಾಡುಗಾರ ಮಾದೇವ ವೇಳಿಪ ಅವರು ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಕಾರ್ಟೋಳಿ ಗ್ರಾಮದ ವ್ಯಕ್ತಿ ಇವರಾಗಿದ್ದಾರೆ. ಇತ್ತೀಚಿಗೆ ಇವರು ಅನಾರೋಗ್ಯದಿಂದ ಬಳಲುತ್ತಿದ್ದರು. * ಮಾದೇವ ವೇಳಿಪ ಅವರು ಜೀವ ಪರಿಸರ ಹಾಗೂ ಕಾಲ ಮಾನಕ್ಕೆ ತಕ್ಕಂತೆ ಜಾನಪದ ಹಾಡುಗಳನ್ನು ಹಾಡುತ್ತಿದ್ದರು, ಹೀಗೆ ಹಲವಾರು ಪರಿಸರ ಹಾಡುಗಳನ್ನು ಹಾಡುತ್ತಿದ್ದರು, ಇದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವನ್ನು ಒದಗಿಸಿತ್ತು. ಮತ್ತೇ ಇವರಿಗೆ ಜಾನಪದ ಪ್ರಶಸ್ತಿ ಕೂಡ ಲಭಿಸಿತ್ತು. * ಉತ್ತರ ಕನ್ನಡ ಜಿಲ್ಲೆಯ ಹಿಂದೆ ಉತ್ತರ ಕೆನರಾ ಎಂದು ಕರೆಯುತ್ತಿದ್ದರು, ಈ ಜಿಲ್ಲೆಯು ಭಾರತದ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾಗಿದೆ. ಇದು ಉತ್ತರಕ್ಕೆ ಗೋವಾ ಹಾಗೂ ಬೆಳಗಾವಿ ಜಿಲ್ಲೆ, ಪೂರ್ವಕ್ಕೆ ಧಾರವಾಡ ಜಿಲ್ಲೆ ಹಾಗೂ ಹಾವೇರಿ ಜಿಲ್ಲೆ, ದಕ್ಷಿಣಕ್ಕೆ ಶಿವಮೊಗ್ಗ ಜಿಲ್ಲೆ, ಉಡುಪಿ ಜಿಲ್ಲೆ ಮತ್ತು ಪಶ್ಚಿಮಕ್ಕೆ ಅರಬ್ಬೀ ಸಮುದ್ರದಿಂದ ಗಡಿಯನ್ನು ಹೊಂದಿದೆ.