Job Description: * ಇತ್ತೀಚಿಗಷ್ಟೇ ಟೀಮ್ ಇಂಡಿಯಾ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ತಂಡವು ಗೆಲುವನ್ನು ದಾಖಲಿಸಿದೆ. ಇದೀಗ ಟೀಮ್ ಇಂಡಿಯಾ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ 5ನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಜಯಿಸಿದೆ. * ಆಂಟಿಗುವಾದ ನಾರ್ತ್ ಸೌಂಡ್ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು, ನಿಗದಿತ 50 ಓವರ್ಗಳಲ್ಲಿ 189 ರನ್ಗಳ ಸಾಧಾರಣ ಮೊತ್ತದ ಟಾರ್ಗೆಟ್'ನ್ನು ನೀಡಿತು. * ಭಾರತ ತಂಡವು ಇಂಗ್ಲೆಂಡ್ ನೀಡಿದ 190 ರನ್ಗಳ ಗುರಿಯನ್ನು ಕೇವಲ 47.4 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್'ಗಳನ್ನೂ ಬಾರಿಸಿ ಗೆಲುವನ್ನು ದಾಖಲಿಸಿತು. * ಪ್ರಸ್ತುತ 2022 ರ ICC ಅಂಡರ್-19 ಕ್ರಿಕೆಟ್ ವಿಶ್ವಕಪ್ ಅಂತರಾಷ್ಟ್ರೀಯ ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಇತ್ತೀಚಿಗೆ ಈ ಪಂದ್ಯಾವಳಿಗಳನ್ನು ವೆಸ್ಟ್ ಇಂಡೀಸ್‌ನಲ್ಲಿ ಜನವರಿ ಮತ್ತು ಫೆಬ್ರವರಿ 2022 ರಲ್ಲಿ ನಡೆಸಲಾಗಿದೆ, ಇದರಲ್ಲಿ '16' ತಂಡಗಳು ಪಾಲ್ಗೊಂಡಿದ್ದವು. ಈ ಪಂದ್ಯಾವಳಿಯು ಅಂಡರ್-19 ಕ್ರಿಕೆಟ್ ವಿಶ್ವಕಪ್‌ನ 14 ನೇ ಆವೃತ್ತಿಯಾಗಿದೆ. ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಮೊದಲ ಪಂದ್ಯವಾಗಿದೆ. * 2021 ರ ನವೆಂಬರ್'ನಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಸಿದ್ಧಪಡಿಸಿತ್ತು, ಈ ಪಂದ್ಯಗಳನ್ನು ಆಂಟಿಗುವಾ, ಗಯಾನಾ, ಸೇಂಟ್ ಕಿಟ್ಸ್ ಮತ್ತು ಟ್ರಿನಿಡಾಡ್ ಕ್ರೀಡಾಂಗಣಗಳಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿತ್ತು. * ಈ ಬಾರಿಯ ಮೊದಲ ಸೂಪರ್ ಲೀಗ್ ಸೆಮಿ-ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಅಫ್ಘಾನಿಸ್ತಾನವನ್ನು 15 ರನ್‌ಗಳಿಂದ ಸೋಲಿಸಿ ಫೈನಲ್ ಹಂತವನ್ನು ತಲುಪಿದ ಮೊದಲ ತಂಡವಾಯಿತು. ಇಂಗ್ಲೆಂಡ್ ತಂಡವು ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ 1998 ರ ಪಂದ್ಯಾವಳಿಯನ್ನು ಗೆದ್ದ ನಂತರ ಮತ್ತೇ ಇದೀಗ ಇಂಗ್ಲೆಂಡ್ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನ ಫೈನಲ್‌ ಫೈನಲ್ ಹಂತವನ್ನು ತಲುಪಿತ್ತು. ಭಾರತ ತಂಡವು 2 ನೇ ಬಾರಿಗೆ ಸೆಮಿಫೈನಲ್‌ ಹಂತದಲ್ಲಿ ಆಸ್ಟ್ರೇಲಿಯಾವನ್ನು 96 ರನ್‌ಗಳಿಂದ ಸೋಲಿಸಿತು. * ಫೈನಲ್ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ತಂಡವನ್ನು '4' ವಿಕೆಟ್‌ಗಳಿಂದ ಸೋಲಿಸಿ 5 ನೇ ಅಂಡರ್-19 ಕ್ರಿಕೆಟ್ ವಿಶ್ವಕಪ್ ನ್ನು ಜಯಿಸಿದೆ.