Job Description: * ಪ್ರಸ್ತುತ ಆಸ್ಟ್ರೇಲಿಯನ್ ಓಪನ್ 2022 ರ ಮಹಿಳಾ ವಿಭಾಗದ ಡಬಲ್ಸ್ ಪ್ರಶಸ್ತಿಯನ್ನು ಚೆಕ್ ಗಣರಾಜ್ಯದ ಅಗ್ರ ಶ್ರೇಯಾಂಕದ ಕತ್ರಿನಾ ಸಿನಿಕೋವಾ, ಬಾರ್ಬೊರಾ ಕ್ರೆಜ್ಕೋವಾ ಅವರು ಜೋಡಿಯು ಜಯಿಸಿದೆ. * ಪ್ರಸ್ತುತ ಕತ್ರಿನಾ ಸಿನಿಕೋವಾ, ಮತ್ತು ಬಾರ್ಬೊರಾ ಕ್ರೆಜ್ಕೋವಾ ಅವರು ಜೋಡಿಯು ಫೈನಲ್‌ ಪಂದ್ಯದಲ್ಲಿ ಕಜಕಿಸ್ತಾನದ ಅನ್ನಾ ಡಿನಿಲಿನಾ ಬ್ರೆಜಿಲ್‌ನ ಬೀಟ್ರಿಸ್ ಹದ್ದದ್ ಮಯ್ಯ ಅವರ ಜೋಡಿಯನ್ನು ಸೋಲಿಸುವ ಮೂಲಕ ಈ ಮಹಿಳಾ ವಿಭಾಗದ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. * ಇದೀಗ ಚೆಕ್ ಗಣರಾಜ್ಯದ ಅಗ್ರ ಶ್ರೇಯಾಂಕದ ಈ ಕ್ರೆಜಿಕೋವಾ ಜೋಡಿಗೆ ಇದು 4ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಈ ಜೋಡಿ ಈ ಹಿಂದೆ 2016 ರಲ್ಲಿ ಹಾಗೂ 2018 ವಿಂಬಲ್ಡನ್ ಪ್ರಶಸ್ತಿಯನ್ನು ಗೆದಿದ್ದಾರೆ, ಹಾಗೂ 2021 ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇದೀಗ 2022 ರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಒಟ್ಟಾರೆ 4ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. * ಆಸ್ಟ್ರೇಲಿಯನ್ ಓಪನ್ ಇದು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಮೆಲ್ಬೋರ್ನ್ ಪಾರ್ಕ್‌ನಲ್ಲಿ ವಾರ್ಷಿಕವಾಗಿ ನಡೆಯುವ ಟೆನಿಸ್ ಪಂದ್ಯಾವಳಿಯಾಗಿದೆ. ಈ ಪಂದ್ಯಾವಳಿಯು ಫ್ರೆಂಚ್ ಓಪನ್, ವಿಂಬಲ್ಡನ್ ಹಾಗೂ US ಓಪನ್‌ಗಿಂತ ಮೊದಲು ಪ್ರತಿ ವರ್ಷ ನಡೆಯುವ '4' ಗ್ರ್ಯಾಂಡ್ ಸ್ಲಾಮ್ ಟೆನಿಸ್ ಸ್ಪರ್ಧೆಗಳಲ್ಲಿ ಮೊದಲನೆ ಸ್ಪರ್ಧೆಯಾಗಿದೆ. ಪ್ರಸ್ತುತ ಈ ಸ್ಪರ್ಧೆಯು ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ಗಳನ್ನು ಒಳಗೊಂಡಿದೆ. ಹಾಗೂ ಪುರುಷರು, ಮಹಿಳೆಯರು ಮತ್ತು ಮಿಶ್ರ ಡಬಲ್ಸ್, ಜೂನಿಯರ್ ಚಾಂಪಿಯನ್‌ಶಿಪ್‌, ಹಾಗೂ ಗಾಲಿಕುರ್ಚಿ, ದಂತಕಥೆಗಳಾಗಿವೆ. ಈ ಆಸ್ಟ್ರೇಲಿಯನ್ ಓಪನ್ ಸ್ಪರ್ಧೆಯನ್ನು1988 ರ ಮೊದಲು ಹುಲ್ಲುಗಾವಲಿನ ಅಂಕಣಗಳಲ್ಲಿ ಆಡಲಾಗುತ್ತಿತ್ತು. * ಆಸ್ಟ್ರೇಲಿಯನ್ ಚಾಂಪಿಯನ್‌ಶಿಪ್‌ಗಳನ್ನು ಮೊದಲ ಬಾರಿಗೆ 1905 ರಲ್ಲಿ ಆಯೋಜಿಸಲಾಗಿತ್ತು, ಆಸ್ಟ್ರೇಲಿಯನ್ ಓಪನ್ ದಕ್ಷಿಣ ಗೋಳಾರ್ಧದಲ್ಲಿ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಒಂದಾಗಿದೆ. ಈ ಸ್ಪರ್ಧೆಗೆ 'ದಿ ಹ್ಯಾಪಿ ಸ್ಲಾಮ್' ಎಂದು ಅಡ್ಡಹೆಸರಿದೆ. ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳಲ್ಲಿ ಅತಿ ಹೆಚ್ಚು ಭಾಗವಹಿಸಿದ ಪಂದ್ಯವಾಗಿದೆ, 812,000 ಕ್ಕೂ ಅಧಿಕ ಜನರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. * ಟ್ರೋಫಿಗಳು: - ಮಹಿಳೆಯರ ಸಿಂಗಲ್ಸ್ ವಿಜೇತರಿಗೆ ದಾಫ್ನೆ ಅಖರ್ಸ್ಟ್ ಮೆಮೋರಿಯಲ್ ಕಪ್ ನ್ನು ನೀಡಲಾಗುತ್ತದೆ. - ಪುರುಷರ ಸಿಂಗಲ್ಸ್ ವಿಜೇತರಿಗೆ ನಾರ್ಮನ್ ಬ್ರೂಕ್ಸ್ ಚಾಲೆಂಜ್ ಕಪ್ ನ್ನು ನೀಡಲಾಗುತ್ತದೆ.