Job Description: * ಪ್ರಸ್ತುತ ವಿಶ್ವ ಚಾಂಪಿಯನ್ ನ್ಯೂಝಿಲ್ಯಾಂಡ್‌ ತಂಡವನ್ನು ಬಾಂಗ್ಲಾದೇಶ ಕ್ರಿಕೆಟ್ ತಂಡವು ಎಂಟು ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ನ್ಯೂಝಿಲ್ಯಾಂಡ್‌ ತಂಡವು ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 328 ರನ್ ಕಲೆಹಾಕಿದ್ದಾರೆ, ಬಾಂಗ್ಲಾದೇಶ ತಂಡವು 458 ರನ್ ಗಳನ್ನೂ ಸಿಡಿಸಿದೆ. 2 ನೇ ಇನ್ನಿಂಗ್ಸ್‌ನಲ್ಲಿ ನ್ಯೂಝಿಲ್ಯಾಂಡ್‌ ತಂಡವು 169 ರನ್ ದಾಖಲಿಸಿತ್ತು, ಈ ತಂಡವನ್ನು ಸೋಲಿಸಲು ಬಾಂಗ್ಲಾದೇಶಕ್ಕೆ 2 ನೇ ಇನ್ನಿಂಗ್ಸ್‌ನಲ್ಲಿ ಕೇವಲ 40 ರನ್‌ ಬೇಕಾದವು. ಬಾಂಗ್ಲಾ ತಂಡವು ಈ ರನ್'ಗಳನ್ನೂ ಕಲೆಹಾಕಿ ನ್ಯೂಝಿಲ್ಯಾಂಡ್‌ ತಂಡವನ್ನು ಸೋಲಿಸಿ ಐತಿಹಾಸಿಕ ಗೆಲುವನ್ನು ಸಾಧಿಸಿತ್ತು. * ಈ ಹಿಂದಿನ 4 ವರ್ಷಗಳಲ್ಲಿ ಈ ಮೈದಾನದಲ್ಲಿ ನಡೆದ 17 ಟೆಸ್ಟ್ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ನ್ಯೂಝಿಲ್ಯಾಂಡ್‌ ತಂಡವು ಸೋಲನ್ನು ಅನುಭವಿಸಿದೆ. * ಇದೀಗ ಈ ವಿಶ್ವ ಟೆಸ್ಟ್‌ ಚಾಂಪಿಯನ್‌ ಮೌಂಟ್ ಮೌಂಗನುಯಿ ಮೈದಾನದಲ್ಲಿ ನಡೆದಿದೆ. ಈ ಮೈದಾನವು ಬೇ ಓವಲ್ ನ್ಯೂಜಿಲೆಂಡ್‌ನ ಬೇ ಆಫ್ ಪ್ಲೆಂಟಿ ಪ್ರದೇಶದಲ್ಲಿ ಮೌಂಟ್ ಮೌಂಗನುಯಿ, ಟೌರಂಗದಲ್ಲಿರುವ ಕ್ರಿಕೆಟ್ ಮೈದಾನವಾಗಿದೆ. ಈ ಮೈದಾನವನ್ನು 2005 ರಲ್ಲಿ ಬ್ಲೇಕ್ ಪಾರ್ಕ್‌ನಲ್ಲಿ ನಿರ್ಮಿಸಲಾಗಿದೆ. ಹಾಗೂ 2014 ರಿಂದ ಪುರುಷರ ಹಾಗೂ ಮಹಿಳೆಯರ ಅಂತರಾಷ್ಟ್ರೀಯ ಸೀಮಿತ ಓವರ್‌ಗಳ ಪಂದ್ಯಗಳನ್ನು ಈ ಬೇ ಓವಲ್ ಆಯೋಜಿಸಿದೆ. ಈ ಮೈದಾನದಲ್ಲಿ ಮೊದಲ ಬಾರಿ 2019 ರ ನವೆಂಬರ್ ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಯೋಜಿಸಲಾಗಿತ್ತು.